Slide
Slide
Slide
previous arrow
next arrow

ನಿತ್ಯಾ ಹೆಗಡೆ ಮುಡಿಗೇರಿದ ‘ಸಾವಿತ್ರಿ ಬಾಯಿ ಪುಲೆ’ ಮಕ್ಕಳ ಪ್ರಶಸ್ತಿ

300x250 AD

ಸಿದ್ದಾಪುರ: ಇಲ್ಲಿನ ಹೆಗ್ಗರಣಿ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ನಿತ್ಯಾ ಉಮಾಕಾಂತ ಹೆಗಡೆ ಪುಣೆಯ ಸಾವಿತ್ರಿ ಬಾಯಿ ಪುಲೆ ಮಕ್ಕಳ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.

ಹತ್ತನೇ ತರಗತಿಯ ವಿದ್ಯಾರ್ಥಿನಿ ನಿತ್ಯಾ ಉಮಾಕಾಂತ ಹೆಗಡೆ ಇವಳನ್ನು ಪ್ರತಿಭಾವಂತ ಮಕ್ಕಳ ಪ್ರಶಸ್ತಿಗೆ ಆಯ್ಕೆಮಾಡಿದ್ದು, ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ, ಅಭಿನಂದಿಸಿದ್ದಾರೆ. ಈಕೆ ಪ್ರಾಥಮಿಕ ಶಾಲೆಯ 5 ನೇ ತರಗತಿಯಲ್ಲಿದ್ದಾಗ ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಭಾಗವಹಿಸಿ, ಜನಮನ ಸೆಳೆದಿದ್ದಳು.

ಶಾಲೆಯಲ್ಲಿ ನಡೆಯುವ ಪ್ರತಿಭಾ ಕಾರಂಜಿಯಂತಹ ಅನೇಕ ಸ್ಪರ್ಧೆಗಳಲ್ಲಿ ಅಂದಿನಿಂದ ಇಂದಿನವರೆಗೂ ಭಾಗವಹಿಸುತ್ತ ಬಹಳ ಪ್ರಶಸ್ತಿಗಳನ್ನೂ ಪಡೆದಿರುತ್ತಾಳೆ. ಪ್ರೌಢಶಾಲೆಯ ಪ್ರತಿಭಾ ಕಾರಂಜಿಯಲ್ಲಿ ಕೋಲಾಟ ಮತ್ತು ಡೊಳ್ಳು ಕುಣಿತದ ಸ್ಪರ್ಧೆಗಳಲ್ಲಿ ಮುಂದಾಳುವಾಗಿ ಕಾಣಿಸಿಕೊಂಡು ತಂಡವನ್ನು ಮುನ್ನಡೆಸಿ ಶಾಲೆಗೆ ಪ್ರಥಮ ಸ್ಥಾನಗಳನ್ನು ದೊರಕಿಸಿಕೊಟ್ಟಿರುತ್ತಾಳೆ.

300x250 AD

ತಂದೆ ಕೃಷಿಕರಾಗಿದ್ದು, ತಾಯಿ ಅಂಗನವಾಡಿ ಶಿಕ್ಷಕಿ. ಪಾಲಕರು ಮಗಳ ಚಟುವಟಿಕೆಗಳಿಗೆ ಯಾವತ್ತೂ ಪ್ರೋತ್ಸಾಹ ನೀಡುತ್ತ ಬಂದಿದ್ದು, ಪ್ರಶಸ್ತಿ ಈಕೆಯ ಮುಡಿಗೇರಿರುವುದು ಸಂತಸ ಹೆಚ್ಚಿಸಿದೆ. ಶಾಲೆಯ ಶಿಕ್ಷಕರು, ಆಡಳಿತ ಸಮಿತಿಯವರು ಹಾಗೂ ಊರಿನ ನಾಗರೀಕರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top