Slide
Slide
Slide
previous arrow
next arrow

ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ : ವಾಹನ ಸಂಚಾರಕ್ಕೆ ತೊಂದರೆ

300x250 AD

ಶ್ರೀಧರ ವೈದಿಕ

ಯಲ್ಲಾಪುರ: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (63) ಸಂಪೂರ್ಣ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ಅಪಾಯಕಾರಿಯಾಗಿ ಪರಿಣಮಿಸಿದೆ.

ತಾಲೂಕಿನ ಕಿರವತ್ತಿಯಿಂದ ಆರಂಭಿಸಿ, ಕೋಳಿಕೇರಿ, ಹಳಿಯಾಳ ಕ್ರಾಸ್, ಆರತಿಬೈಲ್, ಅರಬೈಲ್ ಘಟ್ಟ ಪ್ರದೇಶ, ಗುಳ್ಳಾಪುರ, ರಾಮನಗುಳಿ, ಸುಂಕಸಾಳ, ಹೆಬ್ಬುಳ, ಬಾಳೆಗುಳಿ ಸೇರಿದಂತೆ ಅಂಕೋಲಾದವರೆಗೂ ಹೆದ್ದಾರಿ ಹೊಂಡಮಯವಾಗಿದೆ. ದೊಡ್ಡ ದೊಡ್ಡ ಹೊಂಡಗಳು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಅದರಲ್ಲೂ, ಸಣ್ಣ ವಾಹನಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಕೊರಕಲು ಬಿದ್ದ ಇಳಿಜಾರಿನ ಅಪಾಯಕಾರಿ ತಿರುವುಗಳಲ್ಲಿ ಸರಕು ತುಂಬಿದ ಲಾರಿಗಳು, ಭಾರಿ ಗಾತ್ರದ ವಾಹನಗಳು ಮುಗ್ಗರಿಸಿ ಬೀಳುತ್ತಿವೆ. ಹೆದ್ದಾರಿ ಹೊಂಡದಲ್ಲಿ, ಸಣ್ಣಪುಟ್ಟ ವಾಹನಗಳು ಸರ್ಕಸ್ ಮಾಡುತ್ತ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಹೆದ್ದಾರಿ ಹದಗೆಟ್ಟ ಕಾರಣಕ್ಕೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ವಾಹನಗಳು ಹಾಳಾಗಿ ಪ್ರಯಾಣಿಕರು ನಷ್ಟ, ಕಿರಿಕಿರಿ ಅನುಭವಿಸುವಂತಾಗಿದೆ. ಒಂದು ವಾಹನ ಬಿದ್ದರೆ, ಪ್ರಯಾಣಿಕರು ಹಾಗೂ ವಾಹನ ಸವಾರರು ದಿನವಿಡೀ ಟ್ರಾಫಿಕ್ ಸಮಸ್ಯೆ ಎದುರಿಸಬೇಕಾಗಿದೆ.

300x250 AD

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ವರ್ಷ ಲಕ್ಷಾಂತರ ರೂ. ವ್ಯಯಿಸಿ ರಸ್ತೆ ನಿರ್ವಹಣೆ ಕೈಗೊಳ್ಳುತ್ತದೆ. ಆದರೆ ಕಳಪೆ ಕಾಮಗಾರಿಯಿಂದಲೋ ಅಥವಾ ಅಧಿಕ ಭಾರದ ವಾಹನಗಳ ಓಡಾಟದಿಂದಲೋ ಕೆಲವೇ ತಿಂಗಳಲ್ಲಿ ರಸ್ತೆ ಹದಗೆಡುವುದು ಸಾಮಾನ್ಯವಾಗಿದೆ. ಕಾಟಾಚಾರಕ್ಕೆ ನಿರ್ವಹಣೆ ಕೈಗೊಳ್ಳುವ ಬದಲು ಸಮರ್ಪಕವಾಗಿ ಕೈಗೊಂಡಲ್ಲಿ ವಾಹನ ಸವಾರರಿಗೆ ಕಿರಿಕಿರಿ ತಪ್ಪುತ್ತದೆ ಎಂಬುದು ಪ್ರಯಾಣಿಕರ ಅಭಿಪ್ರಾಯ.


ಕಿರವತ್ತಿ ಭಾಗದಿಂದ ಅರಂಭಗೊಂಡು ಅಂಕೋಲಾದ ಬಾಳೆಗುಳಿಯವರೆಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಪಘಾತ ಸಂಖ್ಯೆಯೂ ಅಧಿಕವಾಗಿದೆ. ಸಂಬಂಧಪಟ್ಟ ಇಲಾಖೆ ಶೀಘ್ರವೇ ದುರಸ್ತಿ ಕಾರ್ಯ ಕೈಗೊಂಡು ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕು.

    - ನಾರಾಯಣ ದೇವಾಡಿಗ (ಲಾರಿ ಚಾಲಕ)

ಕೋಟ್: 2
ಸಂಪೂರ್ಣವಾಗಿ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿಯಿಂದ ಲಘು ಹಾಗೂ ದ್ವಿಚಕ್ರ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ರಾತ್ರಿ ಸಮಯದಲ್ಲಿ ಹೊಂಡ ಗೋಚರಿಸದೇ ಸಾಕಷ್ಟು ಅಪಘಾತಗಳು ಸಂಭವಿಸಿದ ಉದಾಹರಣೆಯೂ ಇದೆ. ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ನಡೆಯಬೇಕು.

      - ಮೋಹನ ನಾಯ್ಕ (ಸಾಮಾಜಿಕ ಕಾರ್ಯಕರ್ತ)
Share This
300x250 AD
300x250 AD
300x250 AD
Back to top