Slide
Slide
Slide
previous arrow
next arrow

ಕಳ್ಳತನ ಯತ್ನ ; ಇಬ್ಬರ ಬಂಧನ

300x250 AD

ಯಲ್ಲಾಪುರ: ಪಟ್ಟಣದ ಗಣಪತಿ ಗಲ್ಲಿಯಲ್ಲಿ ಮನೆಗೆ ನುಗ್ಗಿ ಕಳ್ಳತನ ಯತ್ನ ನಡೆಸಿದ ಆರೋಪಿಗಳನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಪಂಕಜ ದತ್ತುರಾಮ ದೋಮಡಿ ಹಳೆಹುಬ್ಬಳ್ಳಿ, ಪ್ರೇಮ ಶ್ರೀಕಾಂತ ಬದ್ದಿ ಹುಬ್ಬಳ್ಳಿ ಬಂಧಿತ ಆರೋಪಿಯಾಗಿದ್ದಾರೆ.
ಇವರು ಗಣಪತಿ ಗಲ್ಲಿಯ ಸೇವಕ ಕೃಷ್ಣ ಅಂಕೋಲೆಕರ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಹಿತ್ತಲಿನ‌ ಬಾಗಿಲು ಮುರಿದು ಕಬ್ಬಿಣದ ಅಲ್ಮೇರಾ ಒಡೆದು ಕಳ್ಳತನಕ್ಕೆ ಯತ್ನಿಸಿದ್ದರು.

300x250 AD

ಮನೆಯವರು ಗಣಪತಿ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈ ಕಳ್ಳತನದ ಯತ್ನ ನಡೆದಿದ್ದು, ಆರೋಪಿತರು ಸಾರ್ವಜನಿಕರ ಕೈಗೆ ಸಿಕ್ಕಿ ಹಾಕಿಕೊಂಡು ಒದೆ ತಿಂದಿದ್ದಾರೆ. ನಂತರ ಪೊಲೀಸರಿಗೆ ಕಳ್ಳರನ್ನು ಒಪ್ಪಿಸಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top