Slide
Slide
Slide
previous arrow
next arrow

ಟಿಪ್ಪರ್ ಹಾಯಿಸಿ ಕೊಲೆ ಪ್ರಕರಣ; ಕುಷ್ಟಗಿಯಲ್ಲಿ ಆರೋಪಿ ಬಂಧನ

300x250 AD

ಹೊನ್ನಾವರ: ಕಳೆದ ಮಂಗಳವಾರ ರಾತ್ರಿ ತಾಲೂಕಿನ ಅರೆಅಂಗಡಿಯಲ್ಲಿ ಟಿಪ್ಪರ್ ಹಾಯಿಸಿ, ವ್ಯಕ್ತಿಯೋರ್ವನನ್ನು ಕೊಂದು, ಇನ್ನಿಬ್ಬರಿಗೆ ಗಾಯಪಡಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಹಡಿನಬಾಳದ ವಿನಾಯಕ ಭಟ್ಟನನ್ನು ಹೊನ್ನಾವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ನಡೆದ ನಂತರ ಆರೋಪಿ ವಿನಾಯಕನು ಕೊಪ್ಪಳದ ಕುಷ್ಟಗಿಯಲ್ಲಿ ತಲೆಮರೆಸಿಕೊಂಡಿದ್ದನು. ಈ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಹೊನ್ನಾವರಕ್ಕೆ ಆರೋಪಿಯನ್ನು ಕರೆತರಲಾಗಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ.

300x250 AD

ಪೊಲೀಸರು ಈತನ ಹೊರತಾಗಿ ಇನ್ನೂ ಕೆಲವರನ್ನು ವಿಚಾರಣೆ ನಡೆಸುತ್ತಿರುವುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

Share This
300x250 AD
300x250 AD
300x250 AD
Back to top