ಶಿರಸಿ: ರೋಟರಿ ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಅದೇ ಸಂದರ್ಭದಲ್ಲಿ ಇಂಟ್ರಾಕ್ಟ್ ಶಾಲೆಯ ಮಕ್ಕಳಿಗಾಗಿ ಬೆಂಕಿ ಇಲ್ಲದೇ ಅಡುಗೆ ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶ್ರೀನಿಕೇತನ ಶಾಲೆಯ ಶ್ರೇಯಸ್ ಮೊದಲ ಸ್ಥಾನ, ಆಶ್ರಯ ಎರಡನೇ ಹಾಗೂ ಮಾರಿಕಾಂಬಾ ಶಾಲೆಯ ದೀಪಾ ಮೂರನೇ ಸ್ಥಾನ ಗಳಿಸಿದರು.
ನಂತರ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಅವೇಮರಿಯಾ ಶಾಲೆಯ ನಿಕಿತಾ ಬನವಾಸಿ ಭಾಷಣ, ಗೋಳಿ ಸಿದ್ಧಿವಿನಾಯಕ ಶಾಲೆಯ ಶ್ರೇಯಾ ಹೆಗಡೆ ಸಂಗೀತ ಹಾಗೂ ಶ್ರೀನಿಕೇತನ ಶಾಲೆಯ ಪ್ರಣತಿ ಭಟ್ಟ ಒಕುಲುಲೇ ಎಂಬ ಸಾಧನವನ್ನು ನುಡಿಸುತ್ತ ಹಾಡನ್ನು ಹಾಡಿ ನೆರೆದವರನ್ನು ರಂಜಿಸಿದರು.
ಇದೊಂದು ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೇ ನಡೆಸಿದ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮುಜಿತಭಾ ಅಹಮದ್ ಪಾಲ್ಗೊಂಡು ವಿದ್ಯಾರ್ಥಿ ಜೀವನದ ಸವಾಲುಗಳು ಮತ್ತು ಸಾಧನೆ ಮಾಡುವ ವಿಧಾನಗಳ ವಿಷಯವಾಗಿ ಮಾತನಾಡಿದರು. ಅಮೋಘ ಭಟ ಸ್ವಾಗತಿಸಿದರು. ಅತ್ಯಂತ ಹಿರಿಯ ಸದಸ್ಯ ರವಿ ಗಡಿಹಳ್ಳಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಧ್ಯಾನ ಹೆಗಡೆ ವಂದಿಸಿದರು ಹಾಗೂ ಕ್ಷಿತಿಜ ಭಟ್ಟ ಕಾರ್ಯಕ್ರಮ ನಿರ್ವಾಹಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಮತ್ತು ಇನ್ನರ್ ವೀಲ್ ಕುಟುಂಬದ ಸದಸ್ಯರು, ಇಂಟರ್ಯಾಕ್ಟ ಕ್ಲಬ್ ಸದಸ್ಯರು, ಶಿಕ್ಷಕರು ಮತ್ತು ಪಾಲಕರು ಪಾಲ್ಗೊಂಡಿದ್ದರು. ವಿವಿಧ ಮನರಂಜನೆ ಮತ್ತು ಸಿಹಿ ಭೋಜನದೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತೆಂದು ರೋಟರಿ ಕಾರ್ಯದರ್ಶಿ ರೊ. ಗಣಪತಿ ಹೆಗಡೆ ತಿಳಿಸಿದರು.