ಯಲ್ಲಾಪುರ: ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾಮಗಾರಿ ಅನುಷ್ಠಾನಕ್ಕೆ ತರುವ ಮೂಲಕ ಸಾಮೂಹಿಕ ಜವಾಬ್ದಾರಿ ಹೆಚ್ಚಾಗಬೇಕು ಎಂದು ಕೃಷಿ ಇಲಾಖೆಯ ಎಡಿ ನಾಗರಾಜ ನಾಯ್ಕ ಹೇಳಿದರು.
ಅವರು ಬುಧವಾರ ವಜ್ರಳ್ಳಿ ಗ್ರಾಮ ಪಂಚಾಯತದ ಉದ್ಯೋಗ ಖಾತ್ರಿ ಗ್ರಾಮಸಭೆಯಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು. ಕೃಷಿ ಕ್ಷೇತ್ರದಲ್ಲಿ ಹೊಸ ಕೆರೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಿಸಿಕೊಳ್ಳಬಹುದು. ಆ ಮೂಲಕ
ಬರಗಾಲದ ಮುನ್ನ ಜಲಸಂಗ್ರಹದ ಬಗೆಗೆ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷ ಭಗೀರಥ ನಾಯ್ಕ ಅಧ್ಯಕ್ಷತೆವಹಿಸಿ ಮಾತನಾಡಿ, ಸಾರ್ವಜನಿಕ ಅಭಿವೃದ್ಧಿಯಲ್ಲಿ ಎಲ್ಲರ ಪಾತ್ರವಿದೆ. ಸ್ಥಳೀಯವಾಗಿ ಸಮಸ್ಯೆ ಅರಿತು ಅಲ್ಲಿಯ ಅಭಿವೃದ್ಧಿಯ ಬಗ್ಗೆ ಎಲ್ಲರೂ ಶ್ರಮವಹಿಸಬೇಕು ಎಂದರು.
ಪಂಚಾಯತ ಉಪಾಧ್ಯಕ್ಷೆ ಗಂಗಾ ಕೋಮಾರ, ಸದಸ್ಯರಾದ ಗಜಾನನ ಭಟ್ಟ, ಜಿ.ಆರ್. ಭಾಗ್ವತ, ರತ್ನಾ ಬಾಂದೇಕರ, ಲಲಿತಾ ಸಿದ್ದಿ, ಪುಷ್ಪಾ ಆಗೇರ ಇದ್ದರು.