Slide
Slide
Slide
previous arrow
next arrow

ಚೆಸ್ ಟೂರ್ನಮೆಂಟ್: ಹೆಸರು ನೋಂದಾಯಿಸಲು ಇಲ್ಲಿದೆ ಮಾಹಿತಿ

300x250 AD

ಸಿದ್ದಾಪುರ: ಇಲ್ಲಿನ ಭಟ್ ಚೆಸ್ ಸ್ಕೂಲ್ ಮತ್ತು ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ದಿ. ಶಂಕರ್ ಶೇಟ್ ಸ್ಮರಣಾರ್ಥ ದ್ವಿತೀಯ ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್‌ನ್ನು ಇಲ್ಲಿನ ಶ್ರೀ ರಾಘವೇಂದ್ರ ಮಠದ ಸಭಾಭವನದಲ್ಲಿ ಡಿ.3 ರಂದು ನಡೆಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿಯ ಪದಾಧಿಕಾರಿಗಳು ದ್ವಿತೀಯ ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್ ಡಿ.3 ರಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ಪ್ರಾರಂಭವಾಗಲಿದ್ದು, ಪಂದ್ಯಾವಳಿಯು 8 ವರ್ಷ,10 ವರ್ಷ,12 ವರ್ಷ, 14 ವರ್ಷ ಹಾಗೂ16 ವರ್ಷದವರಿಗೆ ಹೀಗೆ 5 ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಡೆಯಲಿದೆ. ಹೆಸರನ್ನು ನೋಂದಾಯಿಸಲು ಡಿ.1 ದಿನಾಂಕದೊಳಗೆ, ಆನಂದ ಸ್ವಾಮಿ ಮೋ. ಸಂಖ್ಯೆ Tel:+918762480128 ಮತ್ತು ವಿನಾಯಕ ಶೇಟ್ ಇವರ ಮೋ. ಸಂಖ್ಯೆ Tel:+916360960550 ಇವರನ್ನು ಸಂಪರ್ಕಿಸಿ ತಮ್ಮ ಆಧಾರ ಕಾರ್ಡ್’ನೊಂದಿಗೆ ನೋಂದಾಯಿಸುವಂತೆ ತಿಳಿಸಿದ್ದಾರೆ.

300x250 AD

ಈ ಸಂದರ್ಭದಲ್ಲಿ ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ವಿನಾಯಕ್ ಶೇಟ್, ಕಾರ್ಯದರ್ಶಿ ನಂದನ್ ಬೋರಕರ, ನಿರ್ದೇಶಕರಾದ ಸುದರ್ಶನ್ ಪಿಳ್ಳೆ, ಆರ್.ಎಂ.ಪಾಟೀಲ್, ಮಹೇಶ ಹೆಗಡೆ, ಮಂಜು ಕುರುಬರ, ಪ್ರಶಾಂತ್ ಶೇಟ್ ಹಾಜರಿದ್ದರು.

Share This
300x250 AD
300x250 AD
300x250 AD
Back to top