Slide
Slide
Slide
previous arrow
next arrow

ಸಮಾಜವನ್ನು ಆತ್ಮ ಜಾಗೃತಿಯೆಡೆಗೆ ಒಯ್ಯುವುದೇ ಶ್ರೀಭಗವತ್ಪಾದದ ಮುಖ್ಯ ಆಶಯ: ಸ್ವರ್ಣವಲ್ಲೀ ಶ್ರೀ

300x250 AD

ಶಿರಸಿ: ಸಮಾಜದಲ್ಲಿರುವ ತನ್ನ ತನದ ಮರೆವನ್ನು ಹೋಗಲಾಡಿಸಿ ಆತ್ಮ ಜಾಗೃತಿಯೆಡೆಗೆ ಕರೆದೊಯ್ಯುವುದೇ ಸ್ವರ್ಣವಲ್ಲೀ ಪ್ರಭಾದ ಮುಖ್ಯ ಆಶಯ ಎಂದು ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳು ನುಡಿದರು.
ಅವರು ಸ್ವರ್ಣವಲ್ಲೀಯ ಸುಧರ್ಮಾ ಸಭಾಂಗಣದಲ್ಲಿ ಹಮ್ಮಿಕೊಂಡ ಶ್ರೀಮಠದ ಅಂಗ ಸಂಸ್ಥೆಯಾದ ಶ್ರೀಭಗವತ್ಪಾದ ಪ್ರಕಾಶನದ ಮಹೋತ್ಸವದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ‌ ನುಡಿದರು.

25 ವರ್ಷಗಳ ಹಿಂದೆ ಸ್ವರ್ಣವಲ್ಲೀ ಪ್ರಭಾ, ಶ್ರೀಭಗವತ್ಪಾದ ಪ್ರಕಾಶನ ಆರಂಭವಾಗಿದೆ.
ಆತ್ಮ ವಿಸ್ಮೃತಿ ಬಗ್ಗೆ ಸಮಾಜ ಹೋಗುತ್ತಿರುವ ವೇಳೆ ಈ ಬಗ್ಗೆ ಜಾಗೃತಿ‌ ಮೂಡಿಸುವದೇ ಮುಖ್ಯ ಆಶಯವಾಗಿದೆ. ಸಮಾಜವನ್ನು ಆತ್ಮ‌ ಜಾಗೃತಿಯತ್ತ ತರುವದೇ ಪ್ರಕಾಶನದ ಆಶಯವಾಗಿದೆ. ಕೆಲವು ಸಲ ಗೊತ್ತಿಲ್ಲದೇ, ಕೆಲವು ಗೊತ್ತಿದ್ದೂ ಕೆಲವು ಘಟನೆಗಳು ನಡೆಯುತ್ತಿರುತ್ತವೆ. ನಾವು ಇನ್ನೇನೋ ಆಕರ್ಷಷೆಯಿಂದ ನೋಡುತ್ತಿದ್ದೇವೆ. ನಮ್ಮತನ ಮರೆಯುತ್ತಿದ್ದೇವೆ ಎಂದೂ ಹೇಳಿದರು.
ಇಂದು ವಿದೇಶ ಸಂಸ್ಕೃತಿ, ಭಾಷೆ, ವೇಷ, ಆಹಾರ ಸೇರಿದಂತೆ ಅನೇಕ ಸಂಗತಿ ನೋಡುತ್ತಿದ್ದೇವೆ. ನಮ್ಮ ತನ ಮರೆತು ಅತ್ತ ವಾಲುತ್ತಿದ್ದೇವೆ. ಒಳ್ಳೆಯ ಸಂಗತಿ ಇದ್ದರೆ ವಿದೇಶದ್ದು ಕೂಡ ಪಡೆಯಬಹುದು. ಆದರೆ, ನಮ್ಮದು ಚೆನ್ನಾಗಿದ್ದರೂ ಇನ್ನೊಂದರೆಡೆ ಮರೆತು ಆಕರ್ಷಿತರಾಗುತ್ತಿರುವದು ಸರಿಯಲ್ಲ ಎಂದ ಶ್ರೀಗಳು, ನಮ್ಮದು ಮರೆತು ಹೋಗುತ್ತಿರುವದು ಸರಿಯಲ್ಲ. ತನ್ನ ಬಗ್ಗೆ ವಿಸ್ಮೃತಿ ಕೂಡ‌ ಮರೆಯಬಾರದು ಎಂದೂ ಹೇಳಿದರು‌.

‘ಸಂದೇಶ ಮಾಲಿಕಾ’ ಕೃತಿ ಬಿಡುಗಡೆಗೊಳಿಸಿದ ಅದಮ್ಯ ಚೇತನದ ಡಾ. ತೇಜಸ್ವಿನಿ ಅನಂತಕುಮಾರ ಮಾತನಾಡಿ, ಮನುಷ್ಯ ಅಭಿವೃದ್ದಿ ಹೆಸರಿನಲ್ಲಿ ಏನೆಲ್ಲ‌ ಮಾಡಿರಬಹುದು. ಆದರೆ, ಪ್ರಕೃತಿಯ ಕೊಡುಗೆಯಲ್ಲಿ ಶೇ.1ರಷ್ಟೂ ಮನುಷ್ಯ ಮಾಡಲು ಆಗಲಿಲ್ಲ. ಪುರಾಣ ಇಂದು‌ ಇತಿಹಾಸ ಆಗಿದ್ದರ ಬಗ್ಗೆ ದಾಖಲೆಗಳು ಸಿಕ್ಕಿ ವೆ. ಆದರೆ ಕಳೆದ 50 ವರ್ಷದಲ್ಲಿ‌ ಪರಿಸರ ನಾಶವನ್ನು ಮಾಡುತ್ತ ಅಭಿವೃದ್ದಿಯತ್ತ ಸಾಗಿದ್ದೇವೆ. ನಮ್ಮ‌ ಶಿಕ್ಷಣ ಬೇಡ ಬೇಡ ಎಂದು ಹೇಳುವದಕ್ಕಿಂತ ಬೇಕು ಬೇಕು ಎಂದು ಹೇಳುವಂತೆ ಮಾಡುತ್ತಿದೆ ಎಂದರು.

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ‌. ನಿರಂಜನ ವಾನಳ್ಳಿ, ಲಾಭದ ಉದ್ದೇಶ ಇಲ್ಲದೇ ಪತ್ರಿಕೆ ನಡೆಯುವದು ದೊಡ್ಡ ಸಂಗತಿ. ಕನ್ನಡಕ್ಕೆ ಕೂಡ ಅನುಪಮ ಕೊಡುಗೆಯಾಗಿದೆ‌. ಕನ್ನಡ ಪತ್ರಿಕೆಗಳು ಆಂಗ್ಲ ಭಾಷೆಯ ಶೀರ್ಷಿಕೆ ಬಳಸುವದು ಕನ್ನಡದ ಶಬ್ದ ಇದ್ದರೂ ಜಾಗತೀಕರಣದ ಪ್ರಭಾವ ಇರಬಹುದು ಎಂದರು.
ಸಂಯುಕ್ತ ಕರ್ನಾಟಕದ ಆಡಳಿತಾಧಿಕಾರಿ ಮೋಹನ ಹೆಗಡೆ ಮಾತನಾಡಿ, ನೈತಿಕತೆ, ಪ್ರಾಮಾಣಿಕತೆ, ಧರ್ಮದಲ್ಲಿ ನಿಷ್ಠೆ ಕಡಿಮೆ ಆಗುತ್ತಿರುವ ನಡುವೆ, ಇಂತಹ ವಿಚಾರದಲ್ಲಿ ಶ್ರೀಮಠ ಅತ್ಯಂತ ಎತ್ತರದಲ್ಲಿದೆ ಎಂದ ಅವರು ಬೆಂಗಳೂರು ಅನಂತಕುಮಾರ ಅವರು ಇದ್ದಿದ್ದರೆ‌ ಜಿಲ್ಲೆಯ ಅನೇಕ ತಲ್ಲಣಗಳಿಗೆ ತಾರ್ಕಿಕ ಅಂತ್ಯ‌ ಕಾಣಿಸುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ ವಿ.ಆರ್.ಎಲ್. ಸಮೂಹ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಮಾತನಾಡಿ, ಜ್ಞಾನಾರ್ಜನೆ ಆಗಬೇಕಾದರೆ ಸನಾತನ ಧರ್ಮದ ಬಗ್ಗೆ ಪುಸ್ತಕ ರೂಪದಿಂದ ಓದಬೇಕು. ಜಗತ್ತಿನಲ್ಲಿ‌ ಎಲ್ಲದಕ್ಕಿಂತ ಕಡಿಮೆ ದರದಲ್ಲಿ‌ ದಿನ ಕನ್ನಡ ಪತ್ರಿಕೆ ಸಿಗುತ್ತಿದೆ. ೧೮-೨೦ ರೂ ದಿನ ಪತ್ರಿಕೆ ಉತ್ಪಾದನೆ ವೆಚ್ಚ ಬರುತ್ತಿದೆ. ನಾವು ೫-೬ ರೂ.ಗೆ ಕೊಡುತ್ತಿವೆ. ಜಾಹೀರಾತಿನಿಂದ ಮಾತ್ರ ಪತ್ರಿಕೆ‌ ನಡೆಯುತ್ತಿವೆ. ಸಾವಿರಾರು ರೂ. ಪಾರ್ಟಿಗೆ ಖರ್ಚು ಮಾಡುವವರು ಒಂದ್ ಪತ್ರಿಕೆ ೫ ರೂ. ಕೊಡಲು ಹಿಂದೆ‌ ಮುಂದೆ ನೋಡುತ್ತಿದ್ದಾರೆ. ಸನಾತನ ಧರ್ಮ ಪ್ರಕಟಿಸುವ ಪತ್ರಿಕೆಗಳ ಸಂಖ್ಯೆ ಕಡಿಮೆ ಇದೆ ಎಂದು ಹೇಳಿದರು.

ವೇದಿಕೆಯಲ್ಲಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಇತರರು ಇದ್ದರು. ನಾಗರತ್ನ ಭಟ್ಟ ಸಂಗಡಿಗರು ಪ್ರಾರ್ಥಿಸಿದರು.
ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಎನ್.ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಫಲ‌ ಸಮರ್ಪಿಸಿದರು. ವನರಾಗ ಶರ್ಮಾ ಗ್ರಂಥ ಪರಿಚಯ ಮಾಡಿದರು‌. ಎಂ.ಎನ್.ಭಟ್ಟ ಕರಸುಳ್ಳಿ ಸನ್ಮಾನ ಪತ್ರ ವಾಚಿಸಿದರು‌‌ ಪ್ರಕಾಶನದ ಕಾರ್ಯದರ್ಶಿ ಪ್ರೋ. ಕಮಲಾಕರ ವಿ.ಭಟ್ಟ ನಿರೂಪಿಸಿದರು. ಜಿ.ಎನ್.ಕೋಮಾರ ವಂದಿಸಿದರು. ಮಠದ ಆಡಳಿತದ ರಾಜರಾಜೇಶ್ವರಿ ಮಹಾ ಪಾಠಶಾಲೆಯ ವಿದ್ಯಾರ್ಥಿಗಳು ಶಾಂತಿ‌ಮಂತ್ರ ಪಠಿಸಿದರು‌. ಇದೇ ವೇಳೆ ಅಧ್ಯಾತ್ಮ ಪ್ರಕಾಶ ಸಂಸ್ಥೆ ಪರವಾಗಿ ಶ್ರೀಮಠದಿಂದ ಲಕ್ಷ್ಮೀಶ ಭಟ್ಟ ಅವರು ಸಮ್ಮಾನ ಸ್ವೀಕರಿಸಿದರು. ಬಳಿಕ ಪಂಡಿತ್ ಗಣಪತಿ ಭಟ್ ಗಾಯನ ಕಾರ್ಯಕ್ರಮ ನಡೆಯಿತು. ಆರ್.ಎನ್.ಭಟ್ಟ ಸಂಗೀತ ಕಾರ್ಯಕ್ರಮ ನಿರ್ವಹಿಸಿದರು.

300x250 AD


ನಾಲ್ಕು ಪೆಡಂಭೂತಗಳು ಯಾವವು? ತೇಜಸ್ವಿನಿ ಹೇಳಿದ ವಾಸ್ತವ!
ಸೇವೆ ಆಗಬೇಕಾದ್ದು ವ್ಯಾಪಾರೀಕರಣವಾಗಿದೆ. ಹುಟ್ಟಿನಿಂದ ಜೀವನದ ಕೊನೇ ತನಕ, ಶಿಕ್ಷಣ,
ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಾರೀಕರಣ ಆಗಿದೆ. ಎರಡನೇಯದ್ದು ಈ‌ಚೆಗೆ
ಹೊರಗಿ‌ನ ಥಳಕು ಜೋರಾಗಿದೆ. ಅದೂ ಯಾಕಾಗಿ ಎಂಬುದು ಗೊತ್ತಿಲ್ಲ. ಮೂರನೇಯದ್ದು ಒಳ್ಳೆ ಸಂಬಳ, ಒಳ್ಳೆ ಅಂಕ ಎಲ್ಲವಕ್ಕೂ ಸ್ಪರ್ಧೆ ಹೆಚ್ಚಾಗಿದೆ. ಮಾರ್ಕ್ಸ ಯಂತ್ರಗಳಾಗಿವೆ. ನಾಲ್ಕನೇಯದ್ದು ಅಸೂಯೆ ಕೂಡ ಹೆಚ್ಚಾಗಿದೆ. ನಾನು ಹೋಗಲಿಲ್ಲ ಎಂದರೂ ಅವನನ್ನು ಕೆಳಗೆ ಹಾಕುವದು ಹೇಗೆ ಎಂಬುದು ನೋಡುತ್ತಾರೆ. ಈ ನಾಲ್ಕನ್ನು ಹೋಗಲಾಡಿಸುವುದು ಹೇಗೆ?

  • ತೇಜಸ್ವಿನಿ ಅನಂತಕುಮಾರ, ಅದಮ್ಯ ಚೇತನ, ಬೆಂಗಳೂರು

ಕನ್ನಡದ ಭಾಷೆಗೆ ಹೊಸ ಹೊಸ ಶಬ್ಧ ಸೇರಿಸಬೇಕು. ಮಕ್ಕಳಿಗೆ ಕನ್ನಡದ ಭಾಷೆ ಸ್ಪಷ್ಟವಾಗಿ ಕಲಿಸಬೇಕು. ಪತ್ರಿಕಾ ಸಂಪಾದಕೀಯ ಬಳಗದವರು ಈ ಬಗ್ಗೆ ಕೂಡ ನೋಡಬೇಕು. ಭಾಷೆಯ ಬಾರದ ಜನಾಂಗವೇ ಸೃಷ್ಟಿಯಾಗುವ ಅಪಾಯ ತಪ್ಪಿಸಬೇಕು.

  • ನಿರಂಜನ ವಾನಳ್ಳಿ, ಉಪ‌ ಕುಲಪತಿಗಳು.

ಕನ್ನಡ ಅಂಕೆ ಬಳಸಿದರೆ ಮಕ್ಕಳಿಗೆ ತಿಳಿಯದೇ ಇರುವ ಸ್ಥಿತಿ‌ ನಿರ್ಮಾಣ ಆಗಿದೆ. ಕೊರೋನಾ ನಂತರ ಪತ್ರಿಕೆ ಓದುವವರು ಕೂಡ‌ ಕಡಿಮೆ ಆಗಿದೆ. ಪತ್ರಿಕೆಯ ಮೇಲೆ ಪರಿಣಾಮ ಕೆಟ್ಟದಾಗಿದೆ. ಎಷ್ಟೋ ಕಡೆ ವಾರಗಟ್ಟಲೆ ಪತ್ರಿಕೆ ಹಾಳಿ ಬಿಡಿಸದೇ ಇರುವದೂ ಇದೆ. ಮೊಬೈಲ್ ಮಾಹಿತಿಗೇ ಸೀಮಿತ ಆಗುತ್ತಿದ್ದಾರೆ.
–ಮೋಹನ ಹೆಗಡೆ, ಆಡಳಿತಾಧಿಕಾರಿಗಳು ಸಂಯುಕ್ತ ಕರ್ನಾಟಕ

ಮಠ ಮಂದಿರಗಳು ಸನಾತನ ಧರ್ಮ ಉಳಿಸಿಬೇಕು. ಸನಾತನೀಯರು ಒಂದು ಎಂಬ ಭಾವನೆ ಬೆಳಸಿಕೊಳ್ಳಬೇಕು.

  • ಡಾ. ವಿಜಯ ಸಂಕೇಶ್ವರ, ಮುಖ್ಯಸ್ಥರು, ವಿಆರ್ ಎಲ್.ಸಮೂಹ ಸಂಸ್ಥೆ
Share This
300x250 AD
300x250 AD
300x250 AD
Back to top