ಕುಮಟಾ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ, ರೆಡ್ ಕ್ರಾಸ್, ಕ್ರೀಡಾ ವಿಭಾಗ, ಎನ್.ಎಸ್.ಎಸ್. ಘಟಕ -1,2,3 ರೇಂಜರ್ಸ್ & ರೋವರ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಸಮಾರಂಭವನ್ನು ಶಾಸಕ ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ವಿದ್ಯಾರ್ಥಿಗಳ ಜೀವನದಲ್ಲಿ ಕಾಲೇಜಿನ ವಿದ್ಯಾಭ್ಯಾಸದ ಅವಧಿಯನ್ನು ಗೋಲ್ಡನ್ ಲೈಫ್ ಎಂದು ಕರೆಯಲಾಗುತ್ತದೆ. ಭವಿಷ್ಯದ ಜೀವನದ ಬಗ್ಗೆ ಕನಸುಗಳನ್ನು ಕಟ್ಟುವ ಘಟ್ಟವಿದು. ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ನಮ್ಮ ದೇಶಕ್ಕೆ ಕೊಡುಗೆಸಲ್ಲಿಸಿದ ಮಹಾಪುರುಷರನ್ನು ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಂಡು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳೇ ನಾಳಿನ ಭವ್ಯಭಾರತದ ಪ್ರಜೆಗಳು. ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಜವಾಬ್ದಾರಿ ಉಪನ್ಯಾಸಕರ ಹಾಗೂ ಪಾಲಕರಮೇಲಿದೆ. ಉತ್ತಮ ಪ್ರಜೆಗಳನ್ನು ರೂಪಿಸುವ ಅಸಾಮಾನ್ಯ ಶಿಲ್ಪಿಗಳೇ ಶಿಕ್ಷಕರು ಎಂದು ಹೇಳಿದರು.
ಕುಮಟಾದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ವಿಜಯಾ ಡಿ. ನಾಯ್ಕ, ಡಾ. ಎ. ವಿ. ಬಾಳಿಗಾ ಕಲಾ ಹಾಗೂ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಸೋಮಶೇಖರ ಗಾಂವಕರ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ರವೀಂದ್ರ ಭಟ್ ಸೂರಿ, ಉಪನ್ಯಾಸಕರಾದ ಡಾ. ಗೀತಾ ಬಿ. ನಾಯಕ, ಐ. ಕೆ. ನಾಯ್ಕ ಹಾಗೂ ಕಾಲೇಜಿನ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಇದ್ದರು.