Slide
Slide
Slide
previous arrow
next arrow

ಕಾರವಾರದಲ್ಲಿ ಒಂದು ಕಬ್ಬಿನ ದರ ₹250 ರಿಂದ ₹300!

300x250 AD

ಕಾರವಾರ: ತುಳಸಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ಕಬ್ಬಿನ ಹೊರೆಗೆ ಭಾರಿ ಬೇಡಿಕೆ ಇತ್ತಾದರೂ, ಅಗತ್ಯದಷ್ಟು ಪೂರೈಕೆ ಇರದ ಪರಿಣಾಮ ಬೆಲೆ ವಿಪರೀತ ಏರಿಕೆ ಕಂಡಿತು. ಮಧ್ಯಾಹ್ನದ ವೇಳೆಗೆ ಒಂದು ಕಬ್ಬಿಗೆ ₹250 ರಿಂದ ₹300 ನೀಡಿ ಗ್ರಾಹಕರು ಕೊಂಡುಕೊಳ್ಳುವ ಸ್ಥಿತಿ ಎದುರಾಯಿತು.

ಹಬ್ಬದ ಮುನ್ನಾದಿನ ಮಾರುಕಟ್ಟೆಯಲ್ಲಿ 10 ರಿಂದ 12 ಕಬ್ಬಿನ ಹೊರೆಯೊಂದಕ್ಕೆ ₹400–₹450 ದರವಿತ್ತು. ಹಬ್ಬದ ದಿನ ಏಕಾಏಕಿ ಬೇಡಿಕೆ ಹೆಚ್ಚಿತು. ಆದರೆ ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣದಷ್ಟು ಕಬ್ಬು ದಾಸ್ತಾನು ಇರಲಿಲ್ಲ. ಆದರೆ ಆಚರಣೆಗೆ ಅಗತ್ಯವಿರುವ ಕಾರಣ ಗ್ರಾಹಕರು ಕಬ್ಬು ಖರೀದಿಗೆ ಮುಗಿಬಿದ್ದಿದ್ದರು.

‘ವ್ಯಾಪಾರಿಗಳು ಕಬ್ಬಿನ ಹೊರೆಯ ಕೊರತೆ ಸೃಷ್ಟಿಸಿ ದರ ಹೆಚ್ಚಿಸಿದ್ದಾರೆ. ಹೊರೆಯೊಂದಕ್ಕೆ ₹1 ಸಾವಿರದಿಂದ ₹3 ಸಾವಿರಕ್ಕೆ ಬೇಡಿಕೆ ಇಟ್ಟವರೂ ಇದ್ದಾರೆ. ಇದರಿಂದ ಸಾಮಾನ್ಯ ಜನರು ಕಬ್ಬು ಖರೀದಿಸಲಾಗದೆ ಬರಿಗೈಲಿ ಮರಳುವ ಸ್ಥಿತಿಯೂ ಉಂಟಾಯಿತು’ ಎಂದು ಆಶ್ರಮ ರಸ್ತೆಯ ನಿವಾಸಿ ಪ್ರಸಾದ ಕಾಮತ್ ಹೇಳಿದರು.

300x250 AD

ಗ್ರಾಹಕರ ಪರದಾಟ ಗಮನಿಸಿದ ಕೆಲ ಸ್ಥಳೀಯ ವ್ಯಾಪಾರಿಗಳು ಸಂಜೆಯ ವೇಳೆಗೆ ಎರಡು ಲೋಡ್‍ನಷ್ಟು ಕಬ್ಬು ತರಿಸಿ ಹೊರೆಯೊಂದಕ್ಕೆ ₹250 ದರಕ್ಕೆ ಮಾರಾಟ ಮಾಡಿದ್ದರು.

Share This
300x250 AD
300x250 AD
300x250 AD
Back to top