Slide
Slide
Slide
previous arrow
next arrow

ನ.25ಕ್ಕೆ ಬಳಗಾರಿನಲ್ಲಿ ‘ಶ್ರೀರಾಮ ಪಟ್ಟಾಭಿಷೇಕ’ ತಾಳಮದ್ದಲೆ

300x250 AD

ಯಲ್ಲಾಪುರ: ಶ್ರೀ ಲಕ್ಷ್ಮಿನೃಸಿಂಹ ಯಕ್ಷವೇದಿಕೆ ಬಳಗಾರ ವತಿಯಿಂದ ಬಳಗಾರ ಯಕ್ಷಲಹರಿ-1 ‘ಶ್ರೀರಾಮ ಪಟ್ಟಾಭಿಷೇಕ’ ತಾಳಮದ್ದಲೆ ಕಾರ್ಯಕ್ರಮವನ್ನು ನ.25, ಶನಿವಾರ ರಾತ್ರಿ 8.30ರಿಂದ ಹಿರೀಮಠ, ಬಳಗಾರ ಗ್ರಾಮದೇವರು ಶ್ರೀ ಲಕ್ಷ್ಮಿನೃಸಿಂಹ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

ಹಿಮ್ಮೇಳದಲ್ಲಿ ಭಾಗವತರಾಗಿ ರವೀಂದ್ರ ಭಟ್ ಅಚವೆ, ಅನಂತ ಹೆಗಡೆ ದಂತಳಿಗೆ, ಮದ್ದಲೆಯಲ್ಲಿ ಶಂಕರ ಭಾಗ್ವತ ಶಿಸ್ತಮುಡಿ, ಗಣಪತಿ ಭಾಗ್ವತ್ ಕವಾಳೆ ಸಹಕರಿಸಲಿದ್ದು, ಮುಮ್ಮೇಳದಲ್ಲಿ ವಿಶ್ವೇಶ್ವರ ಭಟ್ ಸುಣ್ಣಂಬಳ, ವಿ.ಗಣಪತಿ ಭಟ್ ಸಂಕದಗುಂಡಿ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ದತ್ತಾತ್ರೆಯ ಗಾಂವ್ಕರ್, ವಿ.ಮಹೇಶ್ ಭಟ್ ಇಡಗುಂದಿ ಮನರಂಜಿಸಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವ ಕಲಾಸಕ್ತರು ಆಗಮಿಸಿ ಪ್ರೋತ್ಸಾಹಿಸಲು ಸಂಘಟಕರು ಕೋರಿದ್ದಾರೆ.

Share This
300x250 AD
300x250 AD
300x250 AD
Back to top