Slide
Slide
Slide
previous arrow
next arrow

ಜನ್ಮದಿನದ ಪ್ರಯುಕ್ತ e-ಉತ್ತರ ಕನ್ನಡದ ಜೊತೆ ನಿವೇದಿತ್ ಆಳ್ವಾ ಮಾತುಕತೆ

300x250 AD

ಪ್ರತಿನಿಧಿ: ಆಳ್ವಾ ಕುಟುಂಬ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನತೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ನಿ.ಆ: ಮೊದಲ ಲೋಕಸಭಾ ಚುನಾವಣೆಯಿಂದ 3 ಬಾರಿಯ ಚುನಾವಣೆಯಲ್ಲಿ ನಮ್ಮ ಕುಟುಂಬದ ಹಿರಿಯರಾದ ನನ್ನ ಅಜ್ಜ ಉತ್ತರ ಕನ್ನಡವನ್ನು ಪ್ರತಿನಿಧಿಸಿದ್ದಾರೆ. ನನ್ನ ಅಜ್ಜಿ ಕೂಡ ರಾಜ್ಯಸಭಾ ಸದಸ್ಯರಾಗಿದ್ದರು. ಅಮ್ಮ ಮಾರ್ಗರೇಟ್ ಆಳ್ವಾ ಕೂಡ ರಾಜ್ಯಸಭಾ ಸದಸ್ಯರಾದಾಗಲೂ ಕೂಡ ಜಿಲ್ಲೆಗೆ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ನಾನೂ ಸಹ 2005-06 ರಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡು, ಯೂಥ್ ಕಾಂಗ್ರೆಸ್ ಬ್ಲಾಕ್ ಕಾರ್ಯದರ್ಶಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿಯೂ ಕಿತ್ತೂರು, ಖಾನಾಪುರ ಒಳಗೊಂಡ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಲವು ಜನಪರ ಕಾರ್ಯವನ್ನು ಕೈಗೊಂಡಿದ್ದೇನೆ. ಈ ಮೂಲಕ ಜನರೊಂದಿಗೆ ನಾವು ಸದಾ ಅನ್ಯೋನ್ಯತೆಯಿಂದ ಇದ್ದೇವೆ. ಜನರೂ ಸಹ ಆಳ್ವಾ ಕುಟುಂಬಕ್ಕೆ ಉತ್ತಮ ಸ್ಪಂದನೆ ನೀಡುತ್ತಾರೆ.

ಪ್ರತಿನಿಧಿ: ನೀವು ಜಿಲ್ಲೆಯ ಜನರೊಂದಿಗೆ ನಿವೇದಿತ್ ಆಳ್ವಾನಾಗಿ ಇರಲು ಬಯಸುತ್ತೀರೊ ಅಥವಾ ಮಾರ್ಗರೇಟ್ ಆಳ್ವಾ ಅವರ ಪುತ್ರನಾಗಿ ಗುರುತಿಸಿಕೊಳ್ಳಲು ಬಯಸುತ್ತೀರಾ?
ನಿ.ಆ: ನಾನು ಪ್ರಥಮವಾಗಿ ಅಮ್ಮನ ಮಗ. ಆ ಪ್ರೀತಿ ಸದಾ ಇದ್ದೇ ಇರುತ್ತದೆ. ಆದರೆ ಜನರೊಂದಿಗೆ ನಾನು ಎಂದಿಗೂ ಬೆರೆತು, ಅವರ ಕಷ್ಟಕ್ಕೆ ಸ್ಪಂದಿಸುತ್ತೇನೆ. ಆ ಮೂಲಕ ಜನರಲ್ಲಿಯೂ ನಿವೇದಿತ್ ಆಳ್ವಾ ಬಗ್ಗೆ ಉತ್ತಮ ಗೌರವವಿದೆ. ಇನ್ನು ಮುಂದೆಯೂ ಸಹ ಅದೇ
ರೀತಿಯ ಜನಪರ ಕಾಯಕದ ಮೂಲಕ ನಿವೇದಿತ್
ಆಳ್ವಾನಾಗಿ ಬದುಕಲು ಇಷ್ಟಪಡುತ್ತೇನೆ. ಈ ಬಗ್ಗೆ
ಹೋಲಿಕೆ ಮಾಡುವ ಪ್ರಶ್ನೆಯಿಲ್ಲ.

ಪ್ರತಿನಿಧಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ನಿಮ್ಮ ಕ್ಷೇತ್ರದಲ್ಲಿನ ಕಾರ್ಯವೈಖರಿ ಹಾಗು ಆಲೋಚನೆ ಯಾವ ರೀತಿಯಲ್ಲಿ ಬದಲಾವಣೆಯಾಗಿದೆ?
ನಿ.ಆ: ಚುನಾವಣೆಯಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಆದರೆ ಜನತೆಗೆ ಸ್ಪಂದಿಸುವ ಗುಣ ಎಂದಿಗೂ ಇರುತ್ತದೆ. ಈ ಬಗ್ಗೆ ರಾಜ್ಯದ ಹಾಗೂ ಕೇಂದ್ರದ ಹಲವು ಮುಖಂಡರೂ ಸಹ ಮಾತನಾಡಿದ್ದಾರೆ. ಅಧಿಕಾರದ ಅವಧಿಯಲ್ಲಿ ಇದ್ದಾಗಿನಷ್ಟೇ ಅಧಿಕಾರದಲ್ಲಿಲ್ಲದಿದ್ದಾಗಲೂ ನನ್ನ ಕ್ಷೇತ್ರದ ಜನತೆಯ ಕಷ್ಟಕ್ಕೆ ಸ್ಪಂದಿಸುತ್ತೇನೆ.

ಪ್ರತಿನಿಧಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೀವು ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯೇ? ಈ ಬಗ್ಗೆ ನಿಮ್ಮ ನಿರ್ಣಯವೇನು?
ನಿ.ಆ: ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರವಿಲ್ಲ. ಅಭ್ಯರ್ಥಿ ಆಯ್ಕೆ ಬಗ್ಗೆ ಸರ್ವೇ ಕೂಡ ನಡೆಯುತ್ತದೆ. ಹೈಕಮಾಂಡ್ ಹಾಗೂ ಹಿರಿಯ ಮುಖಂಡರ ನಿರ್ಧಾರಕ್ಕೆ ನಾನು ಸದಾ ಬದ್ಧನಿದ್ದೇನೆ. ಈ ಬಗೆಗಿನ ಊಹಾಪೋಹಕ್ಕೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ಪಕ್ಷದ ನಿರ್ಣಯಕ್ಕೆ ನಾವೆಲ್ಲರೂ ಕಟಿಬದ್ಧರಾಗಿದ್ದೇವೆ. ಪಕ್ಷ ನಿರ್ಣಯಿಸಿದ
ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ.

300x250 AD

ಪ್ರತಿನಿಧಿ: ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬಹುದಾ? ಈಬಗ್ಗೆ ನಿಮ್ಮ ಅನಿಸಿಕೆ ಏನು?
ನಿ.ಆ: ಈ ಹಿಂದೆ ನಡೆದ ಕರ್ನಾಟಲ ವಿಧಾನಸಭಾ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಿದ್ದಾರೆ. ಈ ಬಗ್ಗೆ ಎಲ್ಲರಿಗೂ ಗಮನವಿದೆ. ಜನತೆ ಬದಲಾವಣೆ ಬಯಸುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ನಡೆದ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ.

ಪ್ರತಿನಿಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ ನಡುವೆ ಮುಖ್ಯಮಂತ್ರಿ ಖುರ್ಚಿ ಸ್ಥಾನಕ್ಕಾಗಿ ನಡೆಯುತ್ತಿರುವ ಶೀತಲ ಸಮರ ಅಥವಾ ಪಕ್ಷದೊಳಗಿನ ಗೊಂದಲಕ್ಕೆ ನಿಮ್ಮ ಉತ್ತರವೇನು?
ನಿ.ಆ: ಈ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಅದೆಲ್ಲ ಮಾಧ್ಯಮ ಕಲ್ಪಿತ ವರದಿಯಷ್ಟೇ. ಎಲ್ಲರೂ ಸರಿಯಾಗಿಯೇ ಇದ್ದಾರೆ. ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಹೈಕಮಾಂಡ್ ನಿರ್ಣಯವೇ ನಮಗೆ ಅಂತಿಮ ನಿರ್ಣಯ. ಅವರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಭಿವೃದ್ಧಿಗೆ ಹಾಗೂ ಗ್ಯಾರಂಟಿಗಳಿಗೆ ಹಿನ್ನಡೆಯಾಗದಂತೆ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ.

ಪ್ರತಿನಿಧಿ: ಉತ್ತರ ಕನ್ನಡ ಅಥವಾ ನಿಮ್ಮ ಕ್ಷೇತ್ರದ ಜನತೆಗೆ ಏನುಹೇಳಲು ಬಯಸುತ್ತೀರಿ?
ನಿ.ಆ: ನಾವು ಸದಾ ಜನರೊಂದಿಗಿದ್ದೇವೆ. ಜನರ ಕಷ್ಟಕ್ಕೆ ಎಂದಿಗೂ ಸ್ಪಂದಿಸಲು ನಿಮ್ಮ ಆಳ್ವಾ ಸಿದ್ಧನಿದ್ದಾನೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಸದಾ ನನ್ನ ಮೇಲಿರಲಿ.

Share This
300x250 AD
300x250 AD
300x250 AD
Back to top