Slide
Slide
Slide
previous arrow
next arrow

ಡಿ.2ರ ಕಸ್ತೂರಿ ರಂಗನ್ ವರದಿ ವಿರೋಧ ಜಾಥಾಕ್ಕೆ ಭರ್ಜರಿ ತಯಾರಿ

300x250 AD

ಶಿರಸಿ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ವಿರೋಧಿಸಿ ಡಿ.2 ಶನಿವಾರದಂದು ಜರುಗಲಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ರ‍್ಯಾಲಿಗೆ ಜಿಲ್ಲಾದ್ಯಂತ ವ್ಯಾಪಕವಾದ ಪೂರ್ವ ತಯಾರಿ ಜರುಗುತ್ತಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಥಕ್ಕೆ ಸಂಬಂಧಿಸಿ ಜಿಲ್ಲಾದ್ಯಂತ ಜಾಗೃತ ಕಾರ್ಯಕ್ರಮ, ಬಿತ್ತಿಚಿತ್ರ ಮತ್ತು ಕರಪತ್ರ ವಿತರಣೆ, ಜಾಗೃತ ಸಭೆಗಳು ಜಿಲ್ಲಾದ್ಯಂತ ಜರುಗುತ್ತಿದ್ದು ಜಾಥದ ಯಶಸ್ಸಿಗೆ ಸಾವಿರಾರು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡು ಮತ್ತು ಕರಾವಳಿ ಪ್ರದೇಶದ ಜನವಸತಿ ಮೇಲೆ ಉಂಟಾಗುವ ಗಂಭೀರ ಪರಿಣಾಮವನ್ನು ಜನಸಾಮಾನ್ಯರಿಗೆ ತಿಳಿಸುತ್ತಾ, ಜಾಥದ ಯಶಸ್ಸಿಗೆ ಪ್ರಯತ್ನ ಜರುಗುತ್ತಿದೆ ಎಂದು ಅವರು ತಿಳಿಸಿದರು.

300x250 AD

2 ಲಕ್ಷ ಜಾಗೃತ ಕರಪತ್ರ:
ಕಸ್ತೂರಿ ರಂಗನ್ ವರದಿ ಜ್ಯಾರಿಯಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಿಂಬಿಸುವ ಮತ್ತು ವರದಿಯ ತಿರಸ್ಕರಿಸಲು ಇರುವಂತಹ ಅಂಶಗಳನ್ನು ಒಳಗೊಂಡಿರುವ ಎರಡು ಲಕ್ಷ ಕರಪತ್ರವನ್ನು ಮುದ್ರಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top