ಶಿರಸಿ ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಡಾಕ್ಟರ್ ಎ.ಎನ್. ಪಟವರ್ಧನ್ ವೇದಿಕೆಯಲ್ಲಿ ಆಯೋಜನೆಗೊಂಡಿದ್ದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸನ್ಮಾನ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಕನ್ನಡಾಂಬೆಯ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಕನ್ನಡ ಗೀತೆಯನ್ನು ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ಶಿರಸಿ ಭಾಗದ ಕೆಲವು ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಪ್ರಸ್ತುತ ಸಾಲಿನ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ ಶಿಕ್ಷಕರಾದ ನಾರಾಯಣ ಭಾಗ್ವತ್, ಲಯನ್ ಕೆ.ಬಿ.ಪವಾರ್, ಲ.ಡಾ. ಜಿ.ಎ .ಹೆಗಡೆ ಸೋಂದಾ, ಲಯನ್ ಮನೋಹರ್ ಮಲ್ಮನೆ ಮತ್ತು ಶಿರಸಿ ಲಯನ್ಸ್ ಶಾಲೆಯ ಹಿರಿಯ ವಿದ್ಯಾರ್ಥಿನಿ, ಬಯೋಕೆಮಿಸ್ಟ್ರಿ ಎಂ.ಎಸ್ಸಿ.ಯಲ್ಲಿ ಎಂಟು ಚಿನ್ನದ ಪದಕ ಗಳಿಸಿದ ಕುಮಾರಿ ಶುಭಾ ಲಕ್ಷ್ಮೀನಾರಾಯಣ ಹೆಗಡೆ ಇವರೆಲ್ಲರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಪ್ರಸ್ತುತ ಸಾಲಿನ ಅಧ್ಯಕ್ಷರಾದ ಲಯನ್ ಅಶೋಕ್ ಹೆಗಡೆ ಕಾರ್ಯದರ್ಶಿಗಳಾದ ಲಯನ್ ಜ್ಯೋತಿ ಹೆಗಡೆ, ಖಜಾಂಚಿ ಲಯನ್ ಶರಾವತಿ ಭಟ್ ಸೇರಿದಂತೆ ಲಯನ್ಸ್ ನ ಹಲವಾರು ಹಿರಿಯ ಕಿರಿಯ ಸದಸ್ಯರು, ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಲ.ಪ್ರೊ ರವಿ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಮ್ಮ ಸುತ್ತಮುತ್ತಲಿನ ಊರಿನ ಸಾಧಕರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸಿದ ಕಾರ್ಯಕ್ರಮವನ್ನು ಸನ್ಮಾನಿತರು ತುಂಬು ಮನದಿಂದ ಶ್ಲಾಘಿಸಿದರು. ಇಂತಹ ಅರ್ಥಪೂರ್ಣ ವೇದಿಕೆಯಲ್ಲಿ ತಾವು ಇರುವುದಕ್ಕೆ ತಾವು ಧನ್ಯರು ಎಂದೂ, ಇಂತಹ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ಎಂದೂ ಸನ್ಮಾನಿತರು ಆಶಿಸಿದರು.
ಪ್ರಸ್ತುತ ಸಾಲಿನ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಅಶೋಕ್ ಹೆಗಡೆ ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಲಯನ್ ಜ್ಯೋತಿ ಹೆಗಡೆ ವಂದಿಸಿದರು. ಶಾಲೆಯ ಸಹಶಿಕ್ಷಕಿ ಚೇತನಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.