ಸಿದ್ದಾಪುರ: ಬೆಳಗಾವಿಯಲ್ಲಿ ಡಿ.4ರಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಇಲ್ಲಿ ನಡೆದ ಡಿ.2ರಂದು ಶಿರಸಿಯಲ್ಲಿ ಜರುಗಲಿರುವ ಕಸ್ತೂರಿ ರಂಗನ್ ವರದಿ ವಿರೋಧ ಜಾಥದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ 604 ಹಳ್ಳಿಗಳಲ್ಲಿ, 6,998 ಚ.ಕಿ.ಮೀ. ಪ್ರದೇಶವನ್ನ ಪರಿಸರ ಸೂಕ್ಷ್ಮ ಪ್ರದೇಶ ಎಂದು ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಪ್ರಸ್ತಾಪಿಸಲಾಗಿದೆ. ಜಿಲ್ಲೆಯಲ್ಲಿ ಭೌಗೋಳಿಕವಾಗಿ ಶೇ 65ರಷ್ಟು ಭೂ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಸೀತಾರಾಮ ಗೌಡ ಹುಕ್ಕಳಿ, ಹರಿಹರ ನಾಯ್ಕ ಓಂಕಾರ, ನಾಗಪತಿ ಗೌಡ, ಪಾಂಡು ನಾಯ್ಕ ಕೋಲಶಿರ್ಸಿ, ಜೈವಂತ ನಾಯ್ಕ ಕಾನಗೋಡ, ವೀರಭದ್ರ ನಾಯ್ಕ ಶಿರಳಗಿ, ರವಿ ನಾಯ್ಕ ಶಿರಳಗಿ, ಬಿಡಿ ನಾಯ್ಕ ಕುರಗಿತೋಟ, ಸುಧಾಕರ ಮಡಿವಾಳ ಬಿಳಗಿ, ಗಜಾನನ ಮರಾಠಿ, ದಿನೇಶ್ ನಾಯ್ಕ ಬೇಡ್ಕಣಿ, ಜೋನ್ ಮುಂತಾದವರು ಉಪಸ್ಥಿತರಿದ್ದರು.