Slide
Slide
Slide
previous arrow
next arrow

ಡಿ.2,3ಕ್ಕೆ ‘ಮಲೆನಾಡು ಸಾವಯವ ಕೃಷಿ ತೋಟಗಾರಿಕಾ ಜೀವ ವೈವಿಧ್ಯ ಮೇಳ’

300x250 AD

ಶಿರಸಿ: ಕಳೆದ ಹದಿನೈದು ವರ್ಷಗಳಿಂದ ಕದಂಬ ಮಾರ್ಕೆಟಿಂಗ್‌ ಮೂಲಕ ಸ್ಥಳೀಯ ಕೃಷಿ ಜೀವ ವೈವಿಧ್ಯ ಹೆಚ್ಚಿಸಲು-ರಕ್ಷಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹಲಸು, ಮಾವು, ಬಾಳೆ, ಮಿಡಿಮಾವು, ಸಾಂಬಾರು ಗಿಡಗಳ ಮೇಳ, ಕಸಿ-ಗೂಟಿ ತರಬೇತಿ, ಸಸ್ಯಸಂತೆ ಹೀಗೆ ಹಲವು ಕೃಷಿ, ತೋಟಗಾರಿಕೆ, ವನಸ್ಪತೀ ಜೀವವೈವಿಧ್ಯ ರಕ್ಷಣೆ ಅಭಿವೃದ್ಧಿ ಕಾರ್ಯಚಟುವಟಿಕೆಗಳನ್ನು ಮಾಡಲಾಗುತ್ತಿದೆ.

ಈ ಎಲ್ಲ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್ 2, ಶನಿವಾರ ಹಾಗೂ 3, ಭಾನುವಾರರಂದು ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಎಪಿಎಂಸಿ ಯಾರ್ಡ ಶಿರಸಿ ಆವಾರದಲ್ಲಿ ತಾ.ಪಂ. ಜೀವವೈವಿಧ್ಯ ಸಮಿತಿ ಶಿರಸಿ, ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ ಸಹಕಾರದಲ್ಲಿ “ಮಲೆನಾಡು ಸಾವಯವ ಕೃಷಿ ತೋಟಗಾರಿಕಾ ಜೀವ ವೈವಿಧ್ಯ ಮೇಳ”ವನ್ನು ಆಯೋಜಿಸಲಾಗಿದೆ. ಸಾವಯವ ಕೃಷಿ, ಬೀಜ-ಸಸ್ಯ ವೈವಿಧ್ಯ ಪ್ರದರ್ಶನ, ಅರಣ್ಯ, ಕೃಷಿ, ತೋಟಗಾರಿಕಾ ಉಪ ಉತ್ಪನ್ನಗಳ ಮೌಲ್ಯವರ್ಧನೆ & ಮಾರುಕಟ್ಟೆ ಕುರಿತು ಈ ವಿಶಿಷ್ಟ ಮೇಳವನ್ನು ಆಯೋಜಿಸಲಾಗಿದೆ. ಪ್ರಮುಖವಾಗಿ ಲಿಂಬು, ಕಂಚಿ, ಸಿಹಿಕಂಚಿ, ಕಿತ್ತಲೆ ಮುಂತಾದ ಸಿಟ್ರಸ್ ಸಸ್ಯ, ಹಣ್ಣುಗಳ ವೈವಿಧ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ರೈತರು, ತೋಟಗಾರಿಕಾ ತಜ್ಞರ ಜೊತೆ ಸಮಾಲೋಚನಾ ಗೋಷ್ಠಿಗಳು ನಡೆಯಲಿವೆ. ಉ.ಕ. ಜಿಲ್ಲೆ ಹಾಗೂ ಮಲೆನಾಡಿನ ಜಿಲ್ಲೆಗಳ ಸಾವಯವ ರೈತರು, ಮೌಲ್ಯವರ್ಧನೆಯಲ್ಲಿ ನಿರತರಾದ ಮಹಿಳೆಯರು, ವಿಜ್ಞಾನಿಗಳು, ವಿಷಯ ತಜ್ಞರು ಆಗಮಿಸಲಿದ್ದಾರೆ. ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶವನ್ನು ಹೊಂದಿರುವ ಜೀವವೈವಿಧ್ಯ ಮೇಳ ಈ ಭಾಗದ ವಿಶೇಷ ಆಕರ್ಷಣೆ ಆಗಲಿದೆ.

300x250 AD

ಕಾರ್ಯಕ್ರಮದ ಅಂಗವಾಗಿ ನಮ್ಮ ಭಾಗದಲ್ಲಿ ವಾಣಿಜ್ಯಾತ್ಮಕವಾಗಿ ಲಿಂಬು ಮತ್ತು ಕಿತ್ತಳೆ ಕೃಷಿ ಮಾಡುತ್ತಿರುವ ಸುಜಯ ಭಟ್ಟ ಹೊಸಳ್ಳಿಯವರ ತೋಟಕ್ಕೆ ಭೇಟಿ ನೀಡಲಾಗುವದು. ಮ್ಯಾಂಡರೀನ್‌ ಕಿತ್ತಳೆ, ಮಡಿಕೇರಿ ಕಿತ್ತಳೆ ಹಾಗೂ ವಿವಿಧ ಭಾಗದ ಸಿಟ್ರಸ್‌ ಹಣ್ಣಿನ ವಿಶೇಷ ಮೌಲ್ಯವರ್ಧಿತ ಉತ್ಪನ್ನಗಳ ಹಾಗೂ ಇನ್ನಿತರ ಜೀವ ವೈವಿಧ್ಯಕ್ಕೆ ಸಂಬಂಧಿಸಿದ ಪ್ರದರ್ಶನ ಏರ್ಪಡಿಸಲಾಗುವದು. ಆಸಕ್ತ ರೈತರು, ಉದ್ದಿಮೆದಾರರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟಮಾಡಲು ಅಥವಾ ಪ್ರದರ್ಶಿಸಲು ಉಚಿತವಾಗಿ ಅವಕಾಶ ನೀಡಲಾಗುವದು. ಕಾರ್ಯಕ್ರಮದ ಕುರಿತ ಹೆಚ್ಚಿನ ಮಾಹಿತಿಗಾಗಿ ಶ್ರೀವತ್ಸ ಹೆಗಡೆ 9535502274 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top