Slide
Slide
Slide
previous arrow
next arrow

ನ.25ಕ್ಕೆ ಗೋ ಶಾಲೆ ಸಹಾಯಾರ್ಥ ಯಕ್ಷಗಾನ ಪ್ರದರ್ಶನ

300x250 AD

ಕುಮಟಾ: ವಿಶ್ವದ ಪ್ರಪ್ರಥಮ ಗೋ ಬ್ಯಾಂಕ್ ಎಂದು ಹೆಗ್ಗಳಿಕೆಗಳಿಸಿದ ದಕ್ಷಿಣ ಭಾರತದಲ್ಲಿಯೇ ಕಪ್ಪು ಶಿಲಾ ನಿರ್ಮಿತ ಅಪರೂಪದ ಕಾಮಧೇನುವಿನ ಆವಾಸ ಸ್ಥಾನವಾಗಿರುವ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಹೊಸಾಡಿನ ಅಮೃತಧಾರಾ ಗೋ ಶಾಲೆಯ ಸಹಾಯಾರ್ಥ ಯಕ್ಷಗಾನ ಪ್ರದರ್ಶನ ನ.25ಕ್ಕೆ ಶನಿವಾರ ಸಾಯಂಕಾಲ 6-00 ಗಂಟೆಗೆ ಏರ್ಪಡಿಸಲಾಗಿದೆ.

ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ಶ್ರೀ ಮಹಾ ವಿಷ್ಣು ಕಲಾ ಬಳಗ ಕೋಣಾರೆ ಮೂರೂರು ಇವರ ಸಹಯೋಗದಲ್ಲಿ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರಾರಂಭದಲ್ಲಿ ನಾಡಿನಾದ್ಯಂತ ಪ್ರಖ್ಯಾತಿಗಳಿಸಿದ ವಿ. ಗಣಪತಿ ಭಟ್ಟ ಯಲ್ಲಾಪುರ, ಕೊಳಗಿ ಕೇಶವ ಹೆಗಡೆ, ಉಮೇಶ ಭಟ್ಟ ಬಾಡ, ಸರ್ವೇಶ್ವರ ಮೂರೂರು, ಜಿ. ಆರ್. ಹೆಗಡೆ ಅಳವಳ್ಳಿ ಇವರಿಂದ ಗಾನವೈಭವ ಕಾರ್ಯಕ್ರಮ ನಡೆಯಲಿದೆ. ನಿರೂಪಕರಾಗಿ ಮೋಹನ ಹೆಗಡೆ ಹೆರವಟ್ಟಾ ಇರಲಿದ್ದಾರೆ.

ತದನಂತರದಲ್ಲಿ ದಕ್ಷಿಣೋತ್ತರ ಜಿಲ್ಲೆಗಳ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಭಸ್ಮಾಸುರ ಮೋಹಿನಿ ಎಂಬ ಯಕ್ಷಗಾನ ಪ್ರದರ್ಶಿತಗೊಳ್ಳಲಿದೆ. ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ತೋಟಿಮನೆ, ಸುಬ್ರಹ್ಮಣ್ಯ ಮೂರೂರು, ಅಶ್ವಿನಿ ಕೊಂಡದಕುಳಿ, ಗುರುಪ್ರಸಾದ ಭಟ್ಟ, ವಿನಾಯಕ ಭಟ್ಟ ಕತಗಾಲ, ಮಾರುತಿ ನಾಯ್ಕ ಬೈಲ್ಗದ್ದೆ, ಹಾಸ್ಯದಲ್ಲಿ ಶ್ರೀಧರ ಹೆಗಡೆ ಚಪ್ಪರಮನೆಯವರು ಕಾಣಿಸಿಕೊಳ್ಳಲಿದ್ದಾರೆ.

300x250 AD

ಹಿಮ್ಮೇಳದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಸರ್ವೇಶ್ವರ ಹೆಗಡೆ ಮೂರೂರು, ಮೃದಂಗವಾದಕರಾಗಿ ಪರಮೇಶ್ವರ ಭಂಡಾರಿ ಕರ್ಕಿ, ಏ. ಪಿ. ಪಾಠಕ್ ಕಾರ್ಕಳ, ನರಸಿಂಹ ಹೆಗಡೆ ಮೂರೂರು, ಚಂಡೆ ವಾದಕರಾಗಿ ಗಣೇಶ್ ಗಾಂವ್ಕರ ಹಳವಳ್ಳಿ, ಗಜಾನನ ಹೆಗಡೆ ಕತಗಾಲ, ಗಜಾನನ ಹೆಗಡೆ ಕೋಣಾರೆಯವರು ಭಾಗವಹಿಸಲಿದ್ದಾರೆ.

ಗೋ ಸಂತತಿಯನ್ನು ಉಳಿಸಿ ಬೆಳೆಸುವ ಈ ಮಹತ್ಕಾರ್ಯದಲ್ಲಿ ಗೋ ಪ್ರೇಮಿಗಳ ಹಾಗೂ ಕಲಾಸಕ್ತರ ಸಹಭಾಗಿತ್ವವು ಅತ್ಯಮೂಲ್ಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕಾಗಿ ಸಂಘಟಕರು ವಿನಂತಿಸಿಕೊಂಡಿರುತ್ತಾರೆ.

Share This
300x250 AD
300x250 AD
300x250 AD
Back to top