ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ತಾಲೂಕಿನ ಇಸಳೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಗೈದಿದ್ದಾರೆ. ಸುದೀಪ್ ಮಡಿವಾಳ ಭರ್ಚಿ ಎಸೆತ , ಡೆಸ್ಮಂಡ್ ಗಾಡಿ 100 ಮೀ ಓಟ, ಪ್ರಣಿತ್. ಕೆ. 1500 ಮೀ ಓಟ, ರಾಪಿಯ ಸಾಬ ಪೋಲ್ ವಾಲ್ಟ್ , ಸೃಷ್ಟಿ ನಾಯ್ಕ್ ಪೋಲ್ ವಾಲ್ಟನಲ್ಲಿ ಪ್ರಥಮ ಸ್ಥಾನ ಪಡೆದು ಪುತ್ತೂರಿನಲ್ಲಿ ಜರುಗುವ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಅಭಿವೃದ್ಧಿ ಸಮಿತಿ ಶಿಕ್ಷಕರು, ಮುಖ್ಯ ಅಧ್ಯಾಪಕರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.