ಶಿರಸಿ: ಇಲ್ಲಿನ ಚಂದನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನ.22ರಂದು ನಡೆದ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಎಂ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಹಲವು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಥಮ ಪಿಯುಸಿ ವಿಭಾಗದಲ್ಲಿ ಭಕ್ತಿಗೀತೆ ಸ್ಪರ್ಧೆಯಲ್ಲಿ ಅನಘ ವಿ ಹೆಗಡೆ ತೃತೀಯ ಸ್ಥಾನ, ಭಾವಗೀತೆಯಲ್ಲಿ ಪ್ರಥಮ್. ಯೂ ಎನ್. ದ್ವಿತೀಯ ಸ್ಥಾನ, ಜಾನಪದ ಗೀತೆಯಲ್ಲಿ ಐಶ್ವರ್ಯ ಜಿ. ಹೆಗಡೆ ದ್ವಿತೀಯ ಸ್ಥಾನ, ಇಂಗ್ಲಿಷ್ ಚರ್ಚೆಯಲ್ಲಿ ಬಿಂದುಶ್ರೀ ಜೆ. ಪವಾರ ಪ್ರಥಮ ಸ್ಥಾನ, ಕನ್ನಡ ಚರ್ಚೆಯಲ್ಲಿ ದಿಶಾ ಜಿ ಹೆಗಡೆ ಪ್ರಥಮ ಸ್ಥಾನ, ಏಕಪಾತ್ರಾಭಿನಯದಲ್ಲಿ ಎಂ.ವಿ. ಶ್ರೇಯಾ ಪ್ರಥಮ ಸ್ಥಾನ, ಇಂಗ್ಲಿಷ್ ಪ್ರಬಂಧದಲ್ಲಿ ಸಿಂಧು ದ್ವಿತೀಯ ಸ್ಥಾನ, ರಸಪ್ರಶ್ನೆಯಲ್ಲಿ ಪ್ರತೀತ್ ಹೆಗಡೆ, ಭರತ ಎಸ್ ನಾಯ್ಕ. ಪ್ರಥಮ ಸ್ಥಾನ ಪಡೆದಿದ್ದಾರೆ.
ಹಾಗೆಯೆ ದ್ವಿತೀಯ ಪಿಯುಸಿ ವಿಭಾಗದಲ್ಲಿ ಭಕ್ತಿಗೀತೆಯಲ್ಲಿ ಯಶಸ್ವಿನಿ ಹೆಗಡೆ ದ್ವಿತೀಯ ಸ್ಥಾನ, ಜಾನಪದ ಗೀತೆಯಲ್ಲಿ ರಕ್ಷಿತಾ ಎಸ್. ಹೆಗಡೆ ದ್ವಿತೀಯ ಸ್ಥಾನ, ಏಕಪಾತ್ರಾಭಿನಯದಲ್ಲಿ ಸ್ನೇಹಶ್ರೀ ಡಿ. ಹೆಗಡೆ ಪ್ರಥಮ ಸ್ಥಾನ, ಇಂಗ್ಲಿಷ್ ಚರ್ಚೆಯಲ್ಲಿ ನಾಗಾಂಜಲಿ ಎನ್. ಹೆಗಡೆ ಪ್ರಥಮ ಸ್ಥಾನ, ಕನ್ನಡ ಚರ್ಚೆಯಲ್ಲಿ ಪೂರ್ಣಚಂದ್ರ ಎಂ ಹೆಗಡೆ ಪ್ರಥಮ ಸ್ಥಾನ, ಇಂಗ್ಲಿಷ್ ಪ್ರಬಂಧದಲ್ಲಿ ನಿಶ್ಚಿತಾ ಆರ್ ಶೆಟ್ಟಿ ದ್ವಿತೀಯ ಸ್ಥಾನ, ಆಶುಭಾಷಣದಲ್ಲಿ ಅಭಿರಾಮ ವಿ ಹೆಗಡೆ ಪ್ರಥಮ ಸ್ಥಾನ, ರಸಪ್ರಶ್ನೆಯಲ್ಲಿ ವನ್ಯ ಹೆಗಡೆ, ಸನ್ಮತಿ ಕೆ ಹೆಗಡೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಉಪನ್ಯಾಸಕ ವೃಂದದವರು, ಹಾಗೂ ಕಾಲೇಜು ಸಿಬ್ಬಂದಿಗಳು ಅಭಿನಂದಿಸಿ, ಹಾರೈಸಿದ್ದಾರೆ.