ಹೊನ್ನಾವರ: ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಹೊನ್ನಾವರದ ಕಡೆಗೆ ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಸಾಗರ ಸಮೀಪ ಪಲ್ಟಿಯಾಗಿರುವ ಘಟನೆ ನಡೆದಿದೆ.
ಸಾಗರದಿಂದ ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾದ ಪರಿಣಾಮ, ಕಬ್ಬಿನ ರಾಶಿಯ ಮೇಲೆ ಕುಳಿತಿದ್ದ ನಾಲ್ವರು ಕಬ್ಬಿನ ಅಡಿಯಲ್ಲಿ ಸಿಲುಕಿದ್ದರು. ನಂತರದ ಕಬ್ಬಿನ ರಾಶಿಯನ್ನ ತೆರವು ಮಾಡಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲಾಗಿದೆ.
ಗಾಯಾಳುಗಳನ್ನು ಸಾಗರ ಸರಕಾರಿ ಆಸ್ಪತ್ರೆ ರವಾನಿಸಿ ಚಿಕಿತ್ಸೆ ನೀಡಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.