Slide
Slide
Slide
previous arrow
next arrow

ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿಗೆ ಡಾ.ಸುಮಾ ದೇಸಾಯಿ ಆಯ್ಕೆ

300x250 AD

ಬೆಂಗಳೂರು: 2023 ನೇ ಸಾಲಿನ ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆ, ಕೌಜಲಗಿಯ ಡಾ.ಸುಮಾ.ಶಿವಾನಂದ.ದೇಸಾಯಿ ಇವರು ಆಯ್ಕೆಯಾಗಿದ್ದಾರೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವಾರ್ಷಿಕವಾಗಿ ಈ ಪ್ರಶಸ್ತಿ ನೀಡುತ್ತಲಿದ್ದು,ಡಿಸೆಂಬರ್.3 ರಂದು ಬೆಳಿಗ್ಗೆ 10-30 ಕ್ಕೆ ಬಾಗಲಕೋಟೆಯ ಬ.ವಿ.ವಿ.ಸಂಘದ ಪಾಲಿಟೆಕ್ನಿಕ್ ಸೆಮಿನಾರ ಹಾಲ್ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. 25 ಸಾವಿರ ರೂ,ನಗದು,ಪ್ರಶಸ್ತಿ ಪತ್ರ ಹಾಗೂ ಶಾರದಾಮೂರ್ತಿಯನ್ನು ಪ್ರಶಸ್ತಿ ಒಳಗೊಂಡಿರುತ್ತದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅ.ಭಾ.ಸಾ.ಪ.ರಾಜ್ಯ ಉಪಾಧ್ಯಕ್ಷ ಎಸ್.ಜಿ.ಕೋಟಿ ವಹಿಸಲಿದ್ದು, ಪ್ರಧಾನ ಭಾಷಣಕಾರರಾಗಿ ಎಸ್.ಕೆ.ಎಸ್.ಪಾಠಶಾಲೆ ಮುಖ್ಯಾದ್ಯಾಪಕ ಚಿದಾನಂದ ಸ್ವಾಮಿ.ಹಿರೇಮಠ, ಪ್ರಸ್ತಾವನೆಯನ್ನು ಅ.ಭಾ.ಸಾ.ಪ.ಕರ್ನಾಟಕ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ, ಅ.ಭಾ.ಸಾ.ಪ. ಜಿಲ್ಲಾದ್ಯಕ್ಷ ಪ್ರಾಚಾರ್ಯ ಜಿ.ಬಿ.ದಾನಶೆಟ್ಟಿ, ಎ.ಪಾಟೋಳಿ, ಶಿವಾನಂದ.ದೇಸಾಯಿ ಉಪಸ್ಥಿತರಿರಲಿದ್ದಾರೆ.

300x250 AD

ಪ್ರಶಸ್ತಿ ಪುರಸ್ಕೃತರ ಪರಿಚಯ :
1960 ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಜನಿಸಿದ ಡಾ.ಸುಮಾ ದೇಸಾಯಿ ವಿವಾಹವಾದ ನಂತರ ಗುಜರಾತಿನ ವಡೋದರಾದಲ್ಲಿ ನೆಲೆಸಿ ಪ್ರಾಧ್ಯಾಪಕಿಯಾಗಿ, ಸಂಶೋಧಕರಾಗಿ ಸಂಸ್ಕೃತ ಬಾಷೆಯಲ್ಲಿ ಪಿ.ಎಚ್.ಡಿ.ಪದವಿಯನ್ನು ಪಡೆದರು. ಸಂಸ್ಕೃತ ಭಾರತಿಯಲ್ಲಿ ಕಾರ್ಯನಿರ್ವಹಿತ್ತಾ ಅನೇಕ ರಾಷ್ಟ್ರೀಯ ಸಂಸ್ಕೃತ ಸೆಮಿನಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಂಸ್ಕೃತ ಸಂಭಾಷಣಾ ಶಿಬಿರ, ಆನ್ ಲೈನ್ ಪಾಠಗಳನ್ನು ನಡೆಸುತ್ತಿರುವ ಡಾ.ಸುಮಾ ದೇಸಾಯಿಯವರು ಪ್ರಸ್ತುತ ಕೌಜಲಗಿಯ ಬನಶಂಕರಿ ಗೋ ಸಂವರ್ಧನ ಕೇಂದ್ರದಲ್ಲಿ ಪತಿ ಶಿವಾನಂದ ದೇಸಾಯಿಯವರ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

Share This
300x250 AD
300x250 AD
300x250 AD
Back to top