Slide
Slide
Slide
previous arrow
next arrow

ಕರಾಟೆ ಸ್ಪರ್ಧೆ: ಭಟ್ಕಳದ ರಾಹುಲ್ ನಾಯ್ಕ್ ರಾಷ್ಟ್ರಮಟ್ಟಕ್ಕೆ

300x250 AD

ಭಟ್ಕಳ: ಶಿವಮೊಗ್ಗ ಜಿಲ್ಲೆಯಲ್ಲಿ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 14 ವರ್ಷ ವಯೋಮಿತಿ ಒಳಗಿನ ಬಾಲಕ ವಿಭಾಗದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ
ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿ ರಾಹುಲ್ ವಿನಾಯಕ ನಾಯ್ಕ ಚಿನ್ನದ ಪದಕವನ್ನು ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ನಡೆಸಲಾಗಿತ್ತು.

300x250 AD

ಉತ್ತರ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದಕ್ಕೆ ಸಂಸ್ಥೆಯ ಪದಾಧಿಕಾರಿಗಳಾದ ಅಧ್ಯಕ್ಷ ಉಮೇಶ್ ಮೊಗೇರ, ಗೌರವಧ್ಯಾಕ್ಷ ಈಶ್ವರ ನಾಯ್ಕ್, ಉಪಾಧ್ಯಕ್ಷ ಸುರೇಶ ಮೊಗೇರ, ಆರ್ಯನ ನಾಯ್ಕ, ಪ್ರಧಾನ ಕಾರ್ಯದರ್ಶಿಯಾದ ವೆಂಕಟೇಶ್ ಮೊಗೇರ್, ಸಹ ಕಾರ್ಯದರ್ಶಿ ನಾಗಶ್ರೀ ನಾಯ್ಕ, ಕಾನೂನು ಸಲಹೆಗಾರರಾದ ಮನೋಜ ನಾಯ್ಕ, ಖಜಾಂಜಿಯಾದ ಸಂತೋಷ್ ಆಚಾರ್ಯ, ಟ, ಅಶೋಕ ನಾಯ್ಕ,ಸುರೇಶ್ ನಾಯ್ಕ ,ನಾಗಪ್ಪ ನಾಯ್ಕ,ಮಹಮ್ಮದ ಇಸ್ಮಾಯಿಲ್,ಜುವೇಬ್,ಡಿ.ಪ್ರದೀಪ್, ರಾಜಶೇಖರ್ ಗೌಡ, ಗೋಪಾಲ್ ನಾಯ್ಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top