ಶಿರಸಿ: 110 ಕೆ.ವಿ .ಉಪಕೇಂದ್ರದ ಬ್ರೇಕರ್ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ ನಗರದ ಎಲ್ಲಾ ಪ್ರದೇಶಗಳಲ್ಲಿ (ಕೆ.ಎಚ್.ಬಿ ಕಾಲೋನಿ ಹೊರತುಪಡಿಸಿ) ಹಾಗೂ 110/11 ಕೆ.ವಿ ಉಪಕೇಂದ್ರದಿ೦ದ ಹೊರಡುವ ಗ್ರಾಮೀಣ ಮಾರ್ಗಗಳಾದ ಬನವಾಸಿ, ಸುಗಾವಿ, ದೇವನಳ್ಳಿ, ಚಿಪಗಿ, ಮಾರಿಗದ್ದೆ, ಕೆಂಗ್ರೆ, ವಾನಳ್ಳಿ, ಹುಲೇಕಲ್, ಸಾಲ್ಕಣಿ, ಸಂಪಖ೦ಡ, ತಾರಗೋಡ, 11 ಕೆ.ವಿ ಮಾರ್ಗದಲ್ಲಿ ನ.23, ಗುರುವಾರ ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆೆ ಯವರಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಕೆ.ಪಿ.ಟಿ.ಸಿ.ಎಲ್ ಶಿರಸಿ ರವರು ತಿಳಿಸಿರುತ್ತಾರೆ.