Slide
Slide
Slide
previous arrow
next arrow

ಸಹಕಾರ ಸಂಘದ ಪಾರದರ್ಶಕ ವ್ಯವಹಾರದಿಂದ ಸದಸ್ಯರ ವಿಶ್ವಾಸ ಹೆಚ್ಚಳ: ಟಿ.ವಿ.ಶ್ರೀನಿವಾಸ

300x250 AD

ಶಿರಸಿ: ತಾಲೂಕಿನ ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ‘ಸಹಕಾರಿ ಸಪ್ತಾಹ’ ಕಾರ್ಯಕ್ರಮವು ದೇವನಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಉದ್ಘಾಟಕರಾದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಟಿ.ವಿ. ಶ್ರೀನಿವಾಸ, ಮುಂಡಗನಮನೆ ಸೇವಾ ಸಹಕಾರಿ ಸಂಘವು ಉತ್ತಮವಾಗಿ ಕೆಲಸ ನಿರ್ವಹಿಸುತ್ತದೆ. ಸದಸ್ಯರೂ ಕೂಡ ಸಂಘದೊ೦ದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇದರಂತೆ ಸದಸ್ಯರ ಠೇವು ಇಡುವಿಕೆ ಹಾಗೂ ಇತರ ವ್ಯವಹಾರವನ್ನು ಸ್ಥಳೀಯ ಸಂಘದಲ್ಲಿಯೇ ಮಾಡಬೇಕು. ಏಕೆಂದರೆ ಸ್ಥಳೀಯ ಸಂಘವು ತನ್ನ ಪಾರದರ್ಶಕ ವ್ಯವಹಾರವನ್ನು ಜನರಿಗೆ ತಿಳಿಸಿ ಆ ಮೂಲಕ ಸದಸ್ಯರ ವಿಶ್ವಾಸವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಅಲ್ಲದೇ ಬೇರೆ ಕಡೆ ವ್ಯವಹರಿಸುವುದರಿಂದ ಬೇರೆ ಸಂಸ್ಥೆಯನ್ನು ಅಭಿವೃದ್ಧಿ ಮಾಡಿದಂತಾಗುತ್ತದೆ ಎಂದರು.

ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೆಂ. ವೈದ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂಘವು ಸದಸ್ಯರ ಹಿತದೃಷ್ಟಿಯಿಂದ ಸಾಕಷ್ಟು ಕೆಲಸ ಮಾಡುತ್ತಿದೆ. ಸದ್ಯ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗದಿಂದ ಕಂಗಾಲಾಗಿದ್ದಾರೆ. ಆದರೆ ಈ ಬಗ್ಗೆ ವೈಜ್ಞಾನಿಕವಾಗಿ ಮಾರ್ಗದರ್ಶನ ಪಡೆಯಲು ತಜ್ಞರನ್ನು ಕರೆಸಿ ಇಂದು ಈ ರೋಗ ನಿವಾರಣಾ ಕ್ರಮದ ಬಗ್ಗೆ ಕಾರ್ಯಗಾರ ಮಾಡುತ್ತಿದ್ದೇವೆ ಎಂದರು. ಅಲ್ಲದೇ ಇದರ ಪ್ರಯೋಜನವನ್ನು ಹೆಚ್ಚಿನ ರೈತರು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

300x250 AD

ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಾದ ಪಿ.ಜೆ. ಭಟ್ಟ ಮತ್ತಿಘಟ್ಟ ಇವರಿಗೆ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಚಾಲಕ ವೃತ್ತಿಯಲ್ಲಿ ಅಪಘಾತ ರಹಿತ ಸೇವೆ ನಡೆಸಿ ನಿವೃತ್ತರಾಗಿದ್ದಕ್ಕೆ ದಂಪತಿ ಸಮೇತ ಗೌರವಿಸಲಾಯಿತು. ಅತಿಥಿಗಳಾಗಿ ದೇವನಳ್ಳಿ ಗ್ರಾಮಪಂಚಾಯತದ ಅಧ್ಯಕ್ಷರಾದ ನಾಗರಾಜ ಮೀಟು ಮರಾಠಿ ಅವರು ಸಾಂದರ್ಭಿಕವಾಗಿ ಮಾತನಾಡಿದರು. ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ತಜ್ಞರಾಗಿ ಆಗಮಿಸಿದ್ದ ಕೃಷಿತಜ್ಞರಾದ ವಿ.ಎಮ್. ಹೆಗಡೆ, ಹಾಗೂ ತೋಟಗಾರಿಕಾ ಇಲಾಖೆಯ ಗಣೇಶ ಹೆಗಡೆ ಪ್ರೊಜೆಕ್ಟರ್ ಗಳ ಮೂಲಕ ಸಚಿತ್ರ ವಿವರಣೆಗಳೊಂದಿಗೆ ರೈತರಿಗೆ ಎಲೆಚುಕ್ಕೆ ರೋಗದ ಬಗ್ಗೆ ಮಾಹಿತಿಯನ್ನು ನೀಡಿದರು.

ಸಂಘದ ಮುಖ್ಯಕಾರ್ಯನಿರ್ವಾಹಕರಾದ ನಾಗಪತಿ ವಿ ಭಟ್ಟ ನಿರ್ವಹಣೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಸಂಘದ ಲೆಕ್ಕಿಗ ನಿತ್ಯಾನಂದ ಎನ್ ಭಟ್ಟ ರವರ ಪ್ರಾರ್ಥನೆಯನ್ನು ಮೊದಲ್ಗೊಂಡು ಸಂಘದ ನಿರ್ದೇಶಕರಾದ ರಾಘವೇಂದ್ರ ಗಣಪತಿ ಹೆಗಡೆ ಸ್ವಾಗತಿಸಿದರೆ ಬೆಳೆಸಿರಿ ರೈತ ಉತ್ಪಾದಕರ ಕಂಪನಿ ಮತ್ತಿಘಟ್ಟ ಇದರ ಅಧ್ಯಕ್ಷರಾದ ಶ್ರೀಪಾದ ಶಿವರಾಮ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮಾರುಕಟ್ಟೆ ಸಲಹೆಗಾರರಾದ ವಿ. ಆರ್. ಹೆಗಡೆ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದವರಿಗೆ ಕಾರ್ಯಕ್ರಮಕ್ಕೆ ಸ್ಥಳಾವಕಾಶವನ್ನು ಒದಗಿಸಿದ್ದಕ್ಕೆ ವಂದನೆಯನ್ನು ಸಲ್ಲಿಸಿದಲ್ಲದೇ ಶಿಷ್ಟಾಚಾರದಂತೆ ಭಾಗಿಯಾದ ಎಲ್ಲರಿಗೂ ವಂದನಾರ್ಪಣೆಗೈದರು.

Share This
300x250 AD
300x250 AD
300x250 AD
Back to top