Slide
Slide
Slide
previous arrow
next arrow

ಅರಣ್ಯವಾಸಿಗಳ ರಕ್ಷಣೆಗೆ ಬದ್ಧ: ಡಿ.ಎಫ್.ಓ.ರವಿ ಶಂಕರ್

300x250 AD

ಹೊನ್ನಾವರ: ಜಿಪಿಎಸ್ ಆಗಿದೆ ಮನೆ ಕಟ್ಟಲಿಕ್ಕೆ ಕೊಡುವುದಿಲ್ಲ, ಬಿದ್ದಂತಹ ಮನೆ ಕಟ್ಟಲು ಕೊಡುವುದಿಲ್ಲ, ಸಾಗುವಳಿ ಭೂಮಿಯಲ್ಲಿರುವ ಗಿಡ ಮರಗಳನ್ನ ಕಡಿದು ಹಾಕುತ್ತಾರೆ, ಜಿಪಿಎಸ್ ಅಸಮರ್ಪಕವಾಗಿದೆ, ಸರಿ ಮಾಡುವವರು ಯಾರು? ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳಿಗೆ ದೈಹಿಕ ಹಿಂಸೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೋ? ಹೀಗೆ ಮುಂತಾದ ಪ್ರಶ್ನೆಗಳ ಸುರಿಮಳೆ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ ಅವರಿಗೆ ಕೇಳಿಬಂದವು.

ನ. 21, ಮಂಗಳವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ, ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್ ಅವರಿಗೆ, ಅವರ ಕಛೇರಿಯಲ್ಲಿ ಭೇಟ್ಟಿಯಾದಂತಹ ಸಂದರ್ಭದಲ್ಲಿ ಅರಣ್ಯವಾಸಿಗಳಿಂದ ಮೇಲಿನಂತೆ ಪ್ರಶ್ನೆಗಳ ಸುರಿಮಳೆ ಕೇಳಿ ಬಂದವು.

ಹೊನ್ನಾವರ ಮತ್ತು ಭಟ್ಕಳ ತಾಲೂಕಿನಿಂದ ಆಗಮಿಸಿದ ಅರಣ್ಯವಾಸಿಗಳು ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯ, ಕಿರುಕುಳ, ಕಾನೂನು ಬಾಹಿರ ಕೃತ್ಯ, ಕಾನೂನಿಗೆ ವ್ಯತಿರಿಕ್ತವಾಗಿ ಒಕ್ಕಲೆಬ್ಬಿಸುವ ಹಾಗೂ ಸಿಬ್ಬಂದಿಗಳ ದುರ್ನಡತೆಯನ್ನ ಛಾಯಾಚಿತ್ರ ಮತ್ತು ವಿಡಿಯೋಗಳ ಮೂಲಕ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಚರ್ಚೆಯ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದರು.

ಅರಣ್ಯವಾಸಿಗಳ ಅಹವಾಲುಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್ ಅವರು ಅರಣ್ಯವಾಸಿಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಭದ್ರತೆ ನೀಡಲಾಗುವುದು. ಕಾನೂನು ಬಾಹಿರ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳ ಮೇಲೆ ಬಂದಿರುವ ಆರೋಪಗಳನ್ನ ತನಿಖೆಗೆ ಒಳಪಡಿಸಲಾಗುವುದೆಂದು ಅವರು ಹೇಳಿದರು.

300x250 AD

ಚರ್ಚೆಯ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಚಂದ್ರಕಾಂತ ಕೊಚರೇಕರ್, ಜಿಲ್ಲಾ ಸಂಚಾಲಕರಾಗಿರುವಂತಹ ರಾಮಾ ಮರಾಠಿ ಯಲಕೊಟಗಿ, ಮಹೇಶ ನಾಯ್ಕ ಸಾಲ್ಕೋಡ, ಸುರೇಶ ಮೇಸ್ತ ಹೊನ್ನಾವರ, ಉಪಾಧ್ಯಕ್ಷ ದಾವೂದ ಸಾಬ್ ಕಾರ್ಯದರ್ಶಿ ರಜಾಕ್, ಸಂಕೇತ(ಬೆ೦ಕಿ) ಯಲಕೊಟಗಿ, ಪಾಂಡುರ೦ಗ ನಾಯ್ಕ ಬೆಳಕೆ, ಶ್ರೀಕಾಂತ ಶೆಟ್ಟಿ, ಜನಾರ್ಧನ ನಾಯ್ಕ ಚಂದಾವರ, ವಿನೋಧ ನಾಯ್ಕ ಯಲಕೊಟಗಿ, ಸುರೇಶ ನಾಯ್ಕ ನಗರಬಸ್ತಿಕೇರಿ, ಸುರೇಶ್ ತುಂಬೊಳ್ಳಿ, ಕೇಶವ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಡಿ.2ರ ಕಸ್ತೂರಿ ರಂಗನ್ ವರದಿಯ ವಿರೋಧಕ್ಕೆ ಭಾರಿ ಬೆಂಬಲ:
ಹೊನ್ನಾವರ ತಾಲೂಕಿನ, ಪ್ರಭಾತನಗರದ, ಮೂಡಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ, ಡಿಸೆಂಬರ್ ೨, ರಂದು ಶಿರಸಿಯಲ್ಲಿ ಜರುಗುವ ಕಸ್ತೂರಿ ರಂಗನ್ ವರದಿ ವಿರೋಧ ರ‍್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಅರಣ್ಯವಾಸಿಗಳಿಂದ ಭಾರಿ ಬೆಂಬಲ ವ್ಯಕ್ತವಾದವು.

Share This
300x250 AD
300x250 AD
300x250 AD
Back to top