ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊನ್ನಾವರದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿಸಾಧನೆಗೈದಿದ್ದಾರೆ.
ಭಾವಗೀತೆ ಸ್ಪರ್ಧೆಯಲ್ಲಿ ಸೃಜನಾ ಡಿ. ನಾಯಕ ಪ್ರಥಮ ಸ್ಥಾನ ಹಾಗೂ ಪಾವನಿ ಎಮ್. ನಾಯ್ಕ ಇಂಗ್ಲೀಷ್ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ಪ್ರಾರ್ಥನಾ ತಲ್ಲಳ್ಳಿ ಕವನ ವಾಚನದಲ್ಲಿ ದ್ವಿತೀಯ, ವೈಷ್ಣವಿ ವಿ. ಹೆಗಡೆ ಸಂಸ್ಕೃತ ಭಾಷಣದಲ್ಲಿ ದ್ವಿತೀಯ ಹಾಗೂ ಪಾವನಿ ಎಸ್ ನಾಯ್ಕ ರಂಗೋಲಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಈ ರೀತಿ ಉತ್ತಮ ಸಾಧನೆಗೈದ ಅಗ್ರಮಾನ್ಯ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ವರ್ಗ ಅಭಿನಂದಿಸಿ ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.