ಯಲ್ಲಾಪುರ: ವನಪಾಲಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡಗುಂದಿ ಬಳಿ ಭಾನುವಾರ ನಡೆದಿದೆ.
ಇಡಗುಂದಿ ವಲಯ ವನಪಾಲಕ ಕೇಶವ ಓಮಯ್ಯ ಮೇಸ್ತ (36) ಮೃತ ವ್ಯಕ್ತಿ. ಈತ ಇಡಗುಂದಿ ವಲಯದ ವನಪಾಲಕನಾಗಿದ್ದು ಭಾನುವಾರ ಬೆಳಗ್ಗೆ ಮನೆಯಿಂದ ಹೋದವರು ಮಧ್ಯಾಹ್ನವಾದರೂ ಮನೆಗೆ ಬಂದಿರಲಿಲ್ಲ. ಕುಟುಂಬದವರು ಹುಡುಕಾಡಿದಾಗ ಸಮೀಪದ ಮುಂಡಗೆಜಡ್ಡಿ ಅರಣ್ಯದಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಶವ ದೊರೆತಿದೆ. ಈತನ ಸಾವಿನ ಬಗ್ಗೆ ಸಂಶಯವಿದ್ದು ಸಾವಿನ ತನಿಖೆಯಾಗಬೇಕೆಂದು ಕುಟುಂಬದವರು ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.