ಯಲ್ಲಾಪುರ: ನಮ್ಮೊಳಗಿನ ಕತ್ತಲೆ ಕಳೆದು, ಬೆಳಗುವ ಕೆಲಸ ಸಾಹಿತ್ಯದಿಂದ ಆಗಬೇಕು ಎಂದುಸಾಹಿತಿ ಡಾ ಗೋವಿಂದ ಹೆಗಡೆ ಹೇಳಿದರು.
ಅವರು ರವಿವಾರ ಹಣತೆ ಸಾಹಿತ್ಯಿಕ ಸಾಂಸ್ಕೃತಿಕ ಜಗುಲಿ ಉತ್ತರ ಕನ್ನಡ ಇವರ ಆಶ್ರಯದಲ್ಲಿ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಹಣತೆ ಬೆಳಕಿನಲ್ಲಿ ನಡೆದ ದೀಪಾವಳಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಕವಿ ತನ್ನ ಭಾವನೆಯನ್ನು ತೋಡಿಕೊಂಡಾಗ ಕಾವ್ಯ ಪೂರ್ಣವಾಗುತ್ತದೆ. ಸಹೃದಯದ ಭಾವನೆಯನ್ನು ಕವಿತೆ ಹಿಗ್ಗಿಸುತ್ತಾ ಹೋಗಬೇಕು. ಕಾವ್ಯ ಸಲೀಸಾಗಬಾರದು. ಭಾವ, ಶಬ್ದ ಕೋಶವನ್ನು ವಿಸ್ತರಿಸಿಕೊಂಡು,ಅಂತರಂಗದ ಧ್ವನಿಗೆ ಪೂರಕವಾಗಿ ಅನುಭವದ ಸೃಷ್ಠಿ ಹೂರಣಗೊಳ್ಳಬೇಕು ಎಂದರು.
ಸಾಹಿತಿ ವನರಾಗ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ,ಮನಸ್ಸುಗಳ ಭಿನ್ನತೆಯಿಂದ ಅಂತರ ಹೆಚ್ಚುತ್ತಿರುವ ಸಂದರ್ಭದಲ್ಲಿ ಎಲ್ಲರನ್ನೂ ಒಂದಾಗಿಸುವ ಸೃಷ್ಟಿಯ ಪ್ರಜ್ಞೆ ಸಾರುವ ನಿಟ್ಟಿನಲ್ಲಿ ಸಾಹಿತ್ಯ ಒಡಮೂಡಿ ಬರಲಿ. ಸಾಮಾಜಿಕ ಸಾಮರಸ್ಯ ಕಟ್ಟಿಕೊಡುವ ಪ್ರಯತ್ನ ಸಾಹಿತ್ಯದಿಂದ ಆಗಲಿ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಗಣಪತಿ ಕೊಂಡದಕುಳಿ, ಎನ್. ಜಯಚಂದ್ರ, ರಾಘವೇಂದ್ರ ಹೊನ್ನಾವರ ಇದ್ದರು.
ಕವಿಗೋಷ್ಠಿಯಲ್ಲಿ ಸಿಂಧುಚಂದ್ರ ಹೆಗಡೆ, ಶೋಭಾ ಹಿರೆಕೈ, ಗಾಯತ್ರಿ ರಾಘವೇಂದ್ರ, ದತ್ತಾತ್ರೇಯ ಭಟ್,ಸುಬ್ರಾಯ ಗಾಂವ್ಕಾರ, ಸುಮಂಗಲಾ ಚಕ್ರಸಾಲಿ, ಕಮಲಾ ಕೊಂಡದಕುಳಿ, ಪ್ರತಿಮಾ ಕೋಮಾರ, ಅಬ್ದುಲ್ ರೆಹಮಾನ್,ಗಣಪತಿ ಗೆರಕೊಪ್ಪ, ಸಣ್ಣಪ್ಪ ಭಾಗ್ವತ್, ಸುರೇಶ್ ಕಡೆಮನೆ, ಪ್ರಭಾ ಪಟಗಾರ ಭಾಗವಹಿಸಿದ್ದರು.