ಭಟ್ಕಳ: ವರ್ಲ್ಡ್‌ಕಪ್ ಫೈನಲ್‌ನಲ್ಲಿ ಭಾರತ ತಂಡ ಭರ್ಜರಿಯಾಗಿ ಜಯಶಾಲಿಯಾಗಲೆಂದು ಮುರುಡೇಶ್ವರ ನೇತ್ರಾಣಿ ಸ್ಕೂಬಾ ಡೈವಿಂಗ್ ತಂಡದಿಂದ ಸಮುದ್ರದಾಳದಲ್ಲಿ ಭಾರತ ತಂಡಕ್ಕೆ ಶುಭಾಶಯ ಕೋರುವ ಬ್ಯಾನರ್ ಹಿಡಿದು ಸಾಹಸ ಮೆರೆದಿದ್ದಾರೆ.
ಅಹ್ಮದಾಬಾದನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡೋ-ಆಸೀಸ್ ಅಂತಿಮ ಕದನ ಏರ್ಪಟ್ಟಿದ್ದು, ದೇಶಾದ್ಯಂತ ಭಾರತ ತಂಡದ ಗೆಲುವಿಗಾಗಿ ಅಭಿಮಾನಿಗಳು ಪೂಜೆ ಪುನಸ್ಕಾರ ನೆರವೇರಿಸಿದರೆ, ಮುರುಡೇಶ್ವರದಲ್ಲಿ ಗಣೇಶ ಹರಿಕಾಂತ ಮಾಲೀಕತ್ವದ ನೇತ್ರಾಣಿ ಸ್ಕೂಬಾ ಡೈವಿಂಗ್ ತಂಡದಿಂದ ನೇತ್ರಾಣಿಯ ಸಮುದ್ರದಾಳದಲ್ಲಿ ಭಾರತ ತಂಡಕ್ಕೆ ಶುಭಾಶಯಕೋರುವ ಬ್ಯಾನರ್ ಹಿಡಿದು ಸಮುದ್ರಾಳದಲ್ಲಿ ಸಾಹಸ ಮೆರೆಯುವುದರ ಜೊತೆಗೆ ಕ್ರೀಡಾಭಿಮಾನ ಮೆರೆದಿದ್ದಾರೆ.
ಈ ತಂಡದಲ್ಲಿ ಸ್ಕೂಬಾ ಡೈವರ್ಸ್ ಗಳಾದ ಅನಿಷ, ನವೀನ ,ಲೋಕೇಶ ಇದ್ದರು.