Slide
Slide
Slide
previous arrow
next arrow

ಗ್ರಾಮೀಣ ಭಾಗದ ಸಂಘಟನೆಯಿಂದ ಕಲೆಯ ಉಳಿವು ಸಾಧ್ಯ: ನರಸಿಂಹ ಕೋಣೆಮನೆ

300x250 AD

ಯಲ್ಲಾಪುರ: ಕಲೆಯ ಉಳಿವು ಹಾಗೂ ಕಲಾವಿದರ ಬೆಳವಣಿಗೆಯಲ್ಲಿ ಗ್ರಾಮೀಣ ಭಾಗದ ಸಂಘಟನೆಗಳು, ಕಲಾಭಿಮಾನಿಗಳ ಪಾತ್ರ ಮುಖ್ಯವಾದದ್ದು ಎಂದು ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಹೇಳಿದರು.

ಅವರು ತಾಲೂಕಿನ ಮಾಗೋಡ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಗಣಪತಿ ಭಕ್ತವೃಂದ ಕಾರ್ತಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಯಕ್ಷಗಾನ ಪ್ರದರ್ಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ಪ್ರಸಿದ್ಧ ಮದ್ದಲೆವಾದಕ ನರಸಿಂಹ ಭಟ್ಟ ಹಂಡ್ರಮನೆ ದಂಪತಿಯನ್ನು ಗೌರವಿಸಲಾಯಿತು. ಕಲಾವಿದ ನಾಗರಾಜ ಭಾಗ್ವತ ಮಾರ್ಗಜಡ್ಡಿ ಅವರು ತಾವು ಚಿತ್ರಿಸಿದ ನರಸಿಂಹ ಭಟ್ಟ ಹಂಡ್ರಮನೆ ಅವರ ರೇಖಾಚಿತ್ರ ನೀಡಿ ಗೌರವಿಸಿದರು. ಎಲ್ಎಸ್ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್. ಎಸ್.ಭಟ್ಟ, ಗ್ರಾ.ಪಂ ಸದಸ್ಯ ಟಿ.ಆರ್.ಹೆಗಡೆ, ಟಿಎಸ್ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ್, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ ಇತರರಿದ್ದರು. ಸಂಘಟನೆಯ ಪ್ರಮುಖರಾದ ನರಸಿಂಹ ಭಟ್ಟ ಕುಂಕಿಮನೆ, ಮಂಜುನಾಥ ಜೋಶಿ, ನಾರಾಯಣ ಭಟ್ಟ ಹಾಡೆಪಾಲ ನಿರ್ವಹಿಸಿದರು.

300x250 AD

ನಂತರ ಪ್ರಸಿದ್ಧ ಕಲಾವಿದರಿಂದ ‘ಕೃಷ್ಣಾರ್ಜುನ’ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ, ಅನಂತ ಹೆಗಡೆ ದಂತಳಿಗೆ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಪ್ರಮೋದ ಹೆಗಡೆ ಕಬ್ಬಿನಗದ್ದೆ ಭಾಗವಹಿಸಿದ್ದರು. ಅರ್ಜುನನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಕೃಷ್ಣನಾಗಿ ಪ್ರಸನ್ನ ಶೆಟ್ಟಿಗಾರ, ಸುಭದ್ರೆಯಾಗಿ ಶಶಿಕಾಂತ ಶೆಟ್ಟಿ, ರುಕ್ಮಿಣಿಯಾಗಿ ನಾಗರಾಜ ಭಟ್ಟ ಕುಂಕಿಪಾಲ, ದಾರುಕನಾಗಿ ಮಹಾಬಲೇಶ್ವರ ಭಟ್ಟ ಕ್ಯಾದಗಿ, ನಾರದನಾಗಿ ಮಂಜುನಾಥ ಹೆಗಡೆ ಹಿಲ್ಲೂರು, ಭೀಮನಾಗಿ ದೀಪಕ ಭಟ್ಟ ಕುಂಕಿ ಪಾತ್ರ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top