ಯಲ್ಲಾಪುರ: ತಾಲೂಕಿನ ಕಿರವತ್ತಿಯ ಉನ್ನತಿ ಗೌಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಕಟ್ಟಡವನ್ನು ನ.21ರಂದು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ ಎಂದು ಸೊಸೈಟಿ ಅಧ್ಯಕ್ಷ ಮಾಕು ಸೋನು ಕೊಕರೆ ಹೇಳಿದರು.
ಅವರು ಶುಕ್ರವಾರ ಈ ಕುರಿತು ಆಮಂತ್ರಣ ಬಿಡುಗಡೆಗೊಳಿಸಿ ಮಾಹಿತಿ ನೀಡಿ, ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಡಾ ಸುರೇಶ ಗೌಡ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಜಿ.ಪಂ. ಮಾಜಿ ಸದಸ್ಯ ವಿಜಯ ಮಿರಾಶಿ ಭಾಗವಹಿಸಲಿದ್ದಾರೆ ಎಂದರು.
ಸೊಸೈಟಿ 27 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು,ಹಳಿಯಾಳ,ದಾಂಡೇಲಿ, ಮುಂಡಗೋಡಗಳಲ್ಲಿ ಶಾಖೆಗಳನ್ನು ಹೊಂದಿದೆ. ಸಂಘವು 4086 ಶೇರು ಸದಸ್ಯರನ್ನು ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ 31.25 ಲಕ್ಷ ರೂ. ಲಾಭ ಗಳಿಸಿದೆ. ಅಡಿಟ್ ವರ್ಗಿಕರಣದಲ್ಲಿ ಅ ವರ್ಗದಲ್ಲಿ ಮುಂದುವರಿದಿದೆ. 1.75 ಕೋಟಿ ಶೇರು ಬಂಡವಳ ಹೊಂದಿದೆ. 25.13 ಕೋಟಿ ಠೇವಣಿ ಹೊಂದಿದೆ. ಸಂಘವು ಸದಸ್ಯರಿಗೆ ವಿವಿಧ ಸಾಲ ಸೌಲಭ್ಯ ನೀಡುತ್ತ ಬಂದಿದೆ ಎಂದರು.
ಸಂಘದ ಉಪಾಧ್ಯಕ್ಷ ಬೀರು ಅಂಬ್ರು ಹುಂಬೆ,ನಿರ್ದೆಶಕರಾದ ಗಂಗು ಪಾಟೀಲ್,ಕೊಂಡು ಕೊಕರೆ,ಮುಖ್ಯ ಕಾರ್ಯನಿರ್ವಾಹಕ ರೇಖು ಕೊಕರೆ,ಸಿಬ್ಬಂದಿ ಬಾಬು ಬಿ ಖರಾತ್ ಇದ್ದರು.