Slide
Slide
Slide
previous arrow
next arrow

ನ.16ಕ್ಕೆ ‘ದ ಬಿಕಿನಿ ಕಿಲ್ಲರ್ – ಚಾರ್ಲ್ಸ್ ಶೋಭರಾಜ್’ ಕೃತಿ ಲೋಕಾರ್ಪಣ

300x250 AD

ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾ, ವಿಧಾತ್ರಿ ಅಕಾಡೆಮಿ ಮಂಗಳೂರು ಮತ್ತು ರಂಗಸಾರಸ್ವತ ಉತ್ತರಕನ್ನಡ ಸಹಯೋಗದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಡಾ.ಡಿ.ವಿ. ಗುರುಪ್ರಸಾದ್ ರಚಿಸಿದ ‘ದ ಬಿಕಿನಿ ಕಿಲ್ಲರ್ – ಚಾರ್ಲ್ಸ್ ಶೋಭರಾಜ್’ ಕೃತಿ ಲೋಕಾರ್ಪಣ ಕಾರ್ಯಕ್ರಮವು ನ.16, ಗುರುವಾರ, ಮಧ್ಯಾಹ್ನ 3.30ರಿಂದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಮುರಳೀಧರ ಪ್ರಭು ಹೆರವಟ್ಟಾ ವಹಿಸಲಿದ್ದು, ಸಾಹಿತಿ ಮಹಾಬಲಮೂರ್ತಿ ಕೊಡ್ಲಕೆರೆ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಆಶಯ ನುಡಿಗಳನ್ನು ಕೃತಿಕಾರ ಡಾ.ಡಿ.ವಿ.ಗುರುಪ್ರಸಾದ ನುಡಿಯಲಿದ್ದು, ನಿವೃತ್ತ ಪೋಲಿಸ್ ಅಧಿಕಾರಿ ಎನ್.ಟಿ.ಪ್ರಮೋದ ರಾವ್, ವಿಧಾತ್ರಿ ಅಕಾಡೆಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮಕ್ಕೆ ಸರ್ವರಿಗೂ ಆಗಮಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top