ಶಿರಸಿ: ಹುಲಿ,ಚಿರತೆ ಕಾಟ ಹೆಚ್ಚುತ್ತಿರುವ ಬೆನ್ನಲ್ಲೇ ಈ ಗ್ರಾಮಸ್ಥರು ಹುಲಿಬನದಲ್ಲಿ ಪೂಜೆ ಸಲ್ಲಿಸಿದರು. ಯಾವುದೇ ಆತಂಕ, ದುಗುಡಗಳಿಲ್ಲದೇ ಭಕ್ತಿ ಭಾವದಿಂದ ಹುಲಿಯಪ್ಪನಿಗೆ ಪೂಜೆ ಸಲ್ಲಿಸಿದರು.
ತಾಲೂಕಿನ ಮೇಲಿನ ಓಣಿಕೇರೆ ಹತ್ತಿರದ ಪರಮಕೇರಿಯಲ್ಲಿನ ಹುಲಿ ದೇವರ ಕಟ್ಟೆಗೆ ದೀಪಾವಳಿ ಹಬ್ಬದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು.
ಮನೆಯಲ್ಲಿ ತಿಂಡಿ ತಿನ್ನದೇ ಸುತ್ತಲಿನ ಪೂಜೆ ನಡೆಸಿ, ಹುಲಿದೇವರ ಬನದಲ್ಲೂ ಸಾಮೂಹಿಕವಾಗಿ ಪೂಜೆ ಸಲ್ಲಿಸುವದು ವಾಡಿಕೆ. ವಾರ್ಷಿಕ ಸಂಪ್ರದಾಯದಂತೆ ದೇವತೆಮನೆ, ಓಣಿಕೇರಿ ಸುತ್ತಲಿನ ಗ್ರಾಮಸ್ಥರು ಹಣ್ಣು ಕಾಯಿ ಸೇವೆ ಸಲ್ಲಿಸಿದರು.