Slide
Slide
Slide
previous arrow
next arrow

ಯಡಳ್ಳಿ ಬಳಿ ರಿಕ್ಷಾ-ಕಾರ್ ನಡುವೆ ಭೀಕರ ಅಪಘಾತ; ಐವರು ಗಂಭೀರ

300x250 AD

ಶಿರಸಿ: ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಯಡಹಳ್ಳಿ ಸಮೀಪದ ಕಲ್ಲಕೈ ಬಳಿ ಕಾರು ಹಾಗು ಆಟೋರಿಕ್ಷಾ ನಡುವೆ ಭೀಕರ ಅಪಘಾತ ಮಂಗಳವಾರ ಸಂಜೆ ಸಂಭವಿಸಿದೆ.

ಶಿರಸಿ ಕಡೆ ಸಾಗುತ್ತಿದ್ದ ಆಟೋರಿಕ್ಷಾ ಹಾಗು ಎದುರಿನಿಂದ ಬಂದ ಕಾರ್ ನಡುವೆ ಡಿಕ್ಕಿ ಸಂಭವಿಸಿದ್ದು, ಗಾಯಾಳುಗಳು ಒಂದೇ ಕುಟುಂಬದವರು ಎನ್ನಲಾಗಿದೆ. ನಗರದ ನಿಲೇಕಣಿಯ ಶಿರಾಲಿ ಕುಟುಂಬದವರು ಎನ್ನಲಾಗಿದೆ. ಐದು ಜನರಿಗೆ ಗಂಭೀರ ಸ್ವರೂಪದಲ್ಲಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ. ಓರ್ವ ವಯೋವೃದ್ಧೆಗೆ ಎರಡೂ ಕಾಲು ಮುರಿದಿದೆ ಎಂದು ವರದಿಯಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

300x250 AD
Share This
300x250 AD
300x250 AD
300x250 AD
Back to top