Slide
Slide
Slide
previous arrow
next arrow

ನ.19,20ಕ್ಕೆ ಮಂಚಿಕೇರಿಯಲ್ಲಿ ‘ಸಂಸ್ಕೃತಿ ಉತ್ಸವ’: ನಾಟಕ ಪ್ರದರ್ಶನ

300x250 AD

ಯಲ್ಲಾಪುರ: ರಂಗಸಮೂಹ ಮಂಚಿಕೇರಿ ಇದರ ಆಶ್ರಯದಲ್ಲಿ ಸಂಸ್ಕೃತಿ ಉತ್ಸವ ನ.19 ಮತ್ತು 20ರಂದು ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಹಮ್ಮಿಕೊಂಡಿದೆ.

ನ.19 ರಂದು ರವಿವಾರ ಸಂಜೆ 7 ಕ್ಕೆ ಧಾತ್ರಿ ಫೌಂಡೆಶನ್ ಮುಖ್ಯಸ್ಥ ಶ್ರೀನಿವಾಸ ಭಟ್ಟ ಉಧ್ಘಾಟಿಸಲಿದ್ದಾರೆ.ಕೆ.ಎಂ.ಎಫ್ ನಿರ್ದೇಶಕ ಸುರೇಶ್ಚಂದ್ರ ಕೆಶಿನ್ಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ನೀನಾಸಂ ತಿರುಗಾಟದವರಿಂದ ಚಂದ್ರಶೇಖರ ಕಂಬಾರ ರಚನೆಯ ಕೆ.ಜಿ.ಕೃಷ್ಣಮೂರ್ತಿ ನಿರ್ದೇಶನದ ‘ಹುಲಿಯ ನೆರಳು’ ನಾಟಕ‌ ಪ್ರದರ್ಶನಗೊಳ್ಳಲಿದೆ.ನ.20ಸೋಮವಾರ ಸಂಜೆ 7 ಕ್ಕೆ ಲೂಯಿ ಲಕೋಶಿ ರಚನೆ ಮತ್ತು ಶ್ವೇತಾರಾಣಿ ಎಚ್.ಕೆ ನಿರ್ದೇಶನದ ‘ಆಲಯ ಈ ಲಯ’ ನಾಟಕ ನೀನಾಸಂ ತಂಡದಿಂದ ಪ್ರದರ್ಶನಗೊಳ್ಳಲಿದೆ ಎಂದು ರಂಗಸಮೂಹದ ಅಧ್ಯಕ್ಷ ರಾಮಕೃಷ್ಣ ದುಂಡಿ ತಿಳಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top