Slide
Slide
Slide
previous arrow
next arrow

ದಿ.ಗೌರವ ಗೋಳಿಕಟ್ಟೆ ಸ್ಮರಣಾರ್ಥ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಯಶಸ್ವಿ

300x250 AD

ಅಂಕೋಲಾ: ದಿವಂಗತ ಗೌರವ ಗೋಳಿಕಟ್ಟೆ ಸ್ಮರಣಾರ್ಥ ರಾಜ್ಯಮಟ್ಟದ ಆಹ್ವಾನಿತ ಬ್ಯಾಡ್ಮಿಂಟನ್ ಪಂದ್ಯಾವಳಿ ಶನಿವಾರ ಅಂಕೋಲಾದಲ್ಲಿ ಯಶಸ್ವಿಯಾಗಿ ಜರುಗಿತು.

ಪಟ್ಟಣದ ಪಿ.ಎಂ. ಪ್ರೌಢ ಶಾಲಾ ಸಭಾಭವನದಲ್ಲಿ ನಡೆದ ಪಂದ್ಯಾವಳಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಆರೋಗ್ಯಾಧಿಕಾರಿ ಡಾ.ಶರದ್ ಎಸ್ ನಾಯಕ ದಿ. ಗೌರವ ಗೋಳಿಕಟ್ಟೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಕ್ರೀಡೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಅಂಕೋಲೆಯಂತಹ ಪುಟ್ಟ ಊರಿನಲ್ಲೂ ರಾಜ್ಯಮಟ್ಟದ ಪಂದ್ಯಾವಳಿ ನಡೆಸಿರುವುದು ಶ್ಲಾಘನೀಯ. ದಿ. ಗೌರವ ಗೋಳಿಕಟ್ಟೆ ಅವರದು ವಿಶಿಷ್ಟ ಜನಸ್ನೇಹಿ ವ್ಯಕ್ತಿತ್ವ ಎನ್ನುವುದು ಅವರ ಸ್ನೇಹಿತರು ಇಂದು ಅವರ ಸ್ಮರಣಾರ್ಥ ಇಂತಹ ಪಂದ್ಯಾವಳಿಯನ್ನು ಆಯೋಜಿಸಿರುವುದೇ ಸಾಕ್ಷಿಯಾಗಿದೆ ಎಂದರು.

ಕ್ರೀಡಾಂಗಣವನ್ನು ಉದ್ಘಾಟಿಸಿದ ಕೆಪಿಸಿಸಿ ಕಾರ್ಯದರ್ಶಿ ಗೋಪಾಲಕೃಷ್ಣ ಆರ್. ನಾಯಕ ಮಾತನಾಡಿ ದಿ. ಗೌರವ ಗೋಳಿಕಟ್ಟೆ ಎಲ್ಲ ಹಿರಿಯ ಕಿರಿಯರೊಂದಿಗೆ ಉತ್ತಮ ಸ್ನೇಹದಿಂದ ಇದ್ದರು. ಅವರ ವ್ಯಕ್ತಿತ್ವ ನನಗೂ ಮೆಚ್ಚುಗೆಯಾಗಿತ್ತು. ಇಂತಹ ಪಂದ್ಯಾವಳಿಗಳಿಂದ ಅವರ ಹೆಸರು ಇನ್ನೂ ಹೆಚ್ಚು ಕಾಲ ಚಿರಸ್ಥಾಯಿಯಾಗಲಿ ಎಂದರು. ವಲಯ ಅರಣ್ಯಾಧಿಕಾರಿ ಗಣಪತಿ ವಿ. ನಾಯಕ ಮಾತನಾಡಿ ರಾಜ್ಯಮಟ್ಟದ ಪಂದ್ಯಾವಳಿಯನ್ನು ಆಯೋಜಿಸುವದು ಅಷ್ಟು ಸುಲಭವಲ್ಲ ಆದರೆ ಯುವಕರು ದಿ. ಗೌರವ ಮೇಲಿನ ಪ್ರೀತಿ ಅಭಿಮಾನದಿಂದ ಪಂದ್ಯಾವಳಿ ನಡೆಸಲು ಯಶಸ್ವಿಯಾಗಿದ್ದು ಇದು ಇನ್ನೂ ನೂರುಕಾಲ ಮುಂದುವರೆಯಲಿ ಎಂದರು.

300x250 AD

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಐಆರ್‌ಎಸ್ ಉಪ ಆಯುಕ್ತ ಪ್ರಮೋದ ಆರ್. ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ ದಿ. ಗೌರವ ಸ್ಮರಣಾರ್ಥ ನಡೆಸಿದ ಬ್ಯಾಡ್ಮಿಂಟನ್ ಪಂದ್ಯಾವಳಿಯ ಆಯೋಜಕರಿಗೆ ಮತ್ತು ಆಟಗಾರರಿಗೆ ಶುಭ ಕೋರಿದರು. ವೇದಿಕೆಯಲ್ಲಿ ಆರೋಗ್ಯ ಕವಚ 108 ಉತ್ತರ ಕನ್ನಡ ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ಎನ್ ನಾಯಕ, ಉದ್ಯಮಿ ಚೇತನ ನಾಯಕ ಮತ್ತು ಉದ್ಯಮಿ ರಾಮ ಗಾಂವಕರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಕಾಶ, ನಿಖೀಲ, ಸೂರ್ಯಾ, ಸಂಪದ, ವರುಣ ಇನ್ನಿತರರು ಸಂಘಟನೆಯಲ್ಲಿ ಸಹಕರಿಸಿದರು. ನಂತರ ನಡೆದ ರಾಜ್ಯ ಮಟ್ಟದ ಆಹ್ವಾನಿತ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸಹಸ್ರ ಮತ್ತು ಪ್ರಶಾಂತ ಜೋಡಿ ಚಾಂಪಿಯನ್ ಪ್ರಶಸ್ತಿ ಪಡೆದರೆ ಆದರ್ಶ ಮತ್ತು ಆದಿತ್ಯ ರನ್ನರ ಅಪ್ ಆದರು. ಸುಜಯ ಜೋಡಿ ಮೂರನೆ ಸ್ಥಾನ ಹಾಗೂ ಶ್ರೀಮೂರ್ತಿ ಮತ್ತು ವಿಶ್ವಜಿತ್ ನಾಲ್ಕನೇ ಸ್ಥಾನ ಪಡೆದರು.

Share This
300x250 AD
300x250 AD
300x250 AD
Back to top