Slide
Slide
Slide
previous arrow
next arrow

ಯುವತಿ ಕಾಣೆ: ಮಾಹಿತಿ ಸಿಕ್ಕಲ್ಲಿ ತಿಳಿಸಲು ಸೂಚನೆ

300x250 AD

ಅಂಕೋಲಾ: ಮನೆಯಿಂದ ಕಾಲೇಜಿಗೆ ಹೋದ ಯುವತಿಯೋರ್ವಳು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಬೊಬ್ರುವಾಡಾ ಗ್ರಾಮದ ಶ್ವೇತಾ ನಾಯ್ಕ ಕುಮಟಾದ ನೆಲ್ಲಿಕೇರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ನ.7ರಂದು ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು, ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಅಥವಾ ಅವಳನ್ನು ಯಾರಾದರೂ ಅಪಹರಿಸಿಕೊಂಡು ಹೋಗಿರಬಹುದು. ಕಾರಣ ತನ್ನ ಮಗಳನ್ನು ಹುಡುಕಿ ಪತ್ತೆ ಮಾಡಿಕೊಡಿ ಎಂದು, ತಂದೆ ಮಾರುತಿ ಗುಣವಂತ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಂದಾಜು 5 ಪೂಟ್ 1 ಇಂಚು ಎತ್ತರ, ಗೋಧಿ ಮೈ ಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಅರಿತಿರುವ, ಇವಳು ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಟಾಪ್, ಕಪ್ಪು ಬಣ್ಣದ ಲೆಗ್ಗಿನ್ಸ್, ಗುಲಾಬಿ ಬಣ್ಣದ ಶೂ ಧರಿಸಿದ್ದು, ಈ ಮೇಲಿನ ಚಹರೆಯುಳ್ಳ ಯುವತಿ ಎಲ್ಲಿಯಾದರೂ ಕಂಡು ಬಂದಲ್ಲಿ, ಮಾಹಿತಿ ಇದ್ದಲ್ಲಿ ಅಂಕೋಲಾ ಪೊಲೀಸ್ ಠಾಣೆ (Tel:+919480805250/Tel:+919480805268) ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD

***

Share This
300x250 AD
300x250 AD
300x250 AD
Back to top