ಕುಮಟಾ: ಪಟ್ಟಣದ ಗುಡಿಗಾರಗಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮದ ಲಾಂಛನವನ್ನು ಶ್ರೀಶಾಂತಿಕಾ ಪರಮೇಶ್ವರಿ ದೇವಿಯ ಸನ್ನಿಧಾನದಲ್ಲಿ ಶ್ರೀ ಸಂಸ್ಥಾನ ಎಡನೀರು ಮಠದ ಮಠಾಧೀಶ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಪಟ್ಟಣದ ಗುಡಿಗಾರಗಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮದ ಲಾಂಛನವನ್ನು ಬಿಡುಗಡೆಯ ನಂತರ ಶ್ರೀಗಳು ಮೂರು ದಿನಗಳ ಕಾರ್ಯಕ್ರಮಕ್ಕೆ ತಾವು ಉಪಸ್ಥಿತರಿರುವುದಾಗಿ ತಿಳಿಸಿ, ಕಾರ್ಯಕ್ರಮ ಯಶಸ್ವಿಯಾಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸಿ ಆಶೀರ್ವಚನ ನೀಡಿ ಹರಸಿದರು.
ಈ ಸಂದರ್ಭದಲ್ಲಿ ಶತಮಾನೋತ್ತರ ಸಂಭ್ರಮ ಸಮಿತಿಯ ಗೌರವಾಧ್ಯಕ್ಷರಾದ ದೇವಸ್ಥಾನದ ಧರ್ಮದರ್ಶಿಗಳೂ ಆಗಿರುವ ಶ್ರೀ ಕೃಷ್ಣ ಬಾಬಾ ಪೈ,ಶತಮಾನೋತ್ತರ ಸಂಭ್ರಮ ಸಮಿತಿಯ ಅಧ್ಯಕ್ಷರಾದ ಡಿ.ಡಿ.ಶೇಟ್, ಕಾರ್ಯಧ್ಯಕ್ಷರಾದ ಮಂಜುನಾಥ ಎನ್. ರಾಯ್ಕರ್, ಎಂ.ಬಿ.ಪೈ, ಪುರಸಭಾ ಸದಸ್ಯರಾದ ಎಮ್ ಟಿ.ನಾಯ್ಕ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಪ್ರಶಾಂತ ನಾಯ್ಕ, ಸಮನ್ವಯಾಧಿಕಾರಿಗಳಾದ ರೇಖಾ ನಾಯ್ಕ,ಎ ಸ್.ಡಿ.ಎಂ.ಸಿ. ಸದಸ್ಯರು, ಮುಖ್ಯಾಧ್ಯಾಪಕರಾದ ಡಿ ಎಂ ಬಂಟ ಹಾಗೂ ಶಿಕ್ಷಕ ವೃಂದದವರು ವಿವಿಧ ಸಮಿತಿಯ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಸಾರ್ವಜನಿಕರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು