Slide
Slide
Slide
previous arrow
next arrow

ಯುವಜಯ ಫೌಂಡೇಶನ್: ಕರಿಯರ್ ಕನೆಕ್ಟ್ ಪ್ರೋಗ್ರಾಂ ತರಬೇತಿಗೆ ಅರ್ಜಿ- ಜಾಹೀರಾತು

300x250 AD

ಯುವಜಯ ಫೌಂಡೇಶನ್ ಸಮಾಜ ಸೇವಾ ಸಂಸ್ಥೆಯಾಗಿದ್ದು ಕಳೆದ 2 ವರ್ಷಗಳಿಂದ ಗ್ರಾಮೀಣ ಭಾಗದ ನಿರುದ್ಯೋಗ ಸಾಮಾನ್ಯ ಪದವಿ ಪದವೀಧರರಿಗೆ ಅರ್ಥಪೂರ್ಣ ವೃತ್ತಿಜೀವನವನ್ನು ಪ್ರಾರಂಭಿಸಲು ಉದ್ಯೋಗ ಕೌಶಲ್ಯಗಳನ್ನು ಒದಗಿಸುತ್ತದೆ. ಸಂಸ್ಥೆಯು 10 ವಾರಗಳ ಕಾರ್ಯಕ್ರಮವನ್ನು ಹೊಂದಿದ್ದು ಇದರಲ್ಲಿ 8 ವಾರಗಳು ಆನ್‌ಲೈನ್‌ನಲ್ಲಿ ತರಬೇತಿ ಮತ್ತು 2 ವಾರ ಬೆಂಗಳೂರಿನಲ್ಲಿ ಪ್ಲೇಸ್ಮೆಂಟ್ ಚಟುವಟಿಕೆ ಒಳಗೊಂಡಿರುತ್ತದೆ.

ಕರಿಯರ್ ಕನೆಕ್ಟ್ ಪ್ರೋಗ್ರಾಂ ತರಬೇತಿಗೆ ಅರ್ಜಿ

ವಿದ್ಯಾಭ್ಯಾಸ ಪೂರ್ಣಗೊಳಿಸಿದ ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಧಿಗಳಿಂದ ಕರಿಯರ್ ಕನೆಕ್ಟ್ ಪ್ರೋಗ್ರಾಂ – ಕೌಶಲ್ಯ ತರಬೇತಿಗೆ ಯುವಜಯ ಫೌಂಡೇಶನ್ ಅರ್ಜಿ ಆಹ್ವಾನಿಸಿದೆ. ತರಬೇತಿಯು ಸಂಪೂರ್ಣ ಉಚಿತವಾಗಿದ್ದು ನವೆಂಬರ್ ತಿಂಗಳ 27 ರಿಂದ ಬ್ಯಾಚ್ ಪ್ರಾರಂಭವಾಗಲಿದೆ.

ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

300x250 AD

ತರಬೇತಿ ಹೇಗೆ?: ಆನ್ ಲೈನ್ ಮೂಲಕ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿ ಎರಡೂವರೆ ತಿಂಗಳು. ಇಂಗ್ಲಿಷ್ ಕಮ್ಯುನಿಕೇಷನ್, ಪ್ರಸೆಂಟೆಷನ್ ಸ್ಕಿಲ್, ಲಾಜಿಕಲ್ ಥಿಂಕಿಂಗ್, ಮೌಖಿಕ ಸಂದರ್ಶನ ಎದುರಿಸುವ ಕಲೆ, ಸಮಸ್ಯೆ ಪರಿಹರಿಸುವ ವಿಧಾನ, ರೆಸ್ಯೂಮ್ ತಯಾರಿಕೆ ಸೇರಿದಂತೆ ಕೌಶಲ ಆಧಾರಿತ ವಿಚಾರಗಳನ್ನು ತಿಳಿಸಲಾಗುತ್ತದೆ. ತರಬೇತಿ ನೀಡಲು ಪ್ರತಿಷ್ಠಿತ ಕಂಪನಿಗಳದ SAP Lab,Citrix,VM ware ಸಿಬ್ಬಂದಿಗಳು ಕೈ ಜೋಡಿಸಿರೋದು ಮತ್ತೊಂದು ತರಬೇತಿಯ ವೈಶಿಷ್ಟ್ಯ.

ಆನ್‌ಲೈನ್ ತರಬೇತಿ ಬಳಿಕ ಬೆಂಗಳೂರಿನಲ್ಲಿ ಎರಡು ವಾರಗಳ ವಸತಿ ಸಹಿತ ಪ್ಲೇಸ್ ಮೆಂಟ್ ಸಪೋರ್ಟ್ ಚಟುವಟಿಕೆ ಇರುತ್ತದೆ. ಈ ಅವಧಿಯಲ್ಲಿ ಪ್ರತಿಷ್ಠಿತ ಕಂಪನಿಗಳ ಇಂಟರ್‌ವ್ಯೂಗಳಿಗೆ ವಿದ್ಯಾರ್ಥಿಗಳನ್ನು ಕಳಿಸಲಾಗುತ್ತದೆ.
ಈವರೆಗೆ 11 ಬ್ಯಾಚ್ ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. 320 ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದ ಆ ಪೈಕಿ 290 ವಿದ್ಯಾರ್ಥಿಗಳಿಗೆ ಐಬಿಎಂ, ಇನ್ಫೋಸಿಸ್, ಟಿಸಿಎಸ್ ಸೇರಿದಂತೆ ನಾನಾ ಕಾರ್ಪೋರೇಟ್ ಕಂಪನಿಗಳಲ್ಲಿ ನೌಕರಿ ಸಿಕ್ಕಿದೆ ಎಂದು ಯುವಜಯ ಫೌಂಡೇಶನ್ ಸಂಸ್ಥಾಪಕರು ತಿಳಿಸಿದ್ದಾರೆ.

ಪದವಿ ಮುಗಿದ ವಿದ್ಯಾರ್ಥಿಗಳು ವೆಬ್ ಸೈಟ್ http://www.yuvajaya.org ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ Tel;+918088547193 ಈ ಸಂಖ್ಯೆ ಗೆ “Hi” ಮೆಸೇಜ್ ಕಳುಹಿಸಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. Tel:+918088547193 ಸಂಪರ್ಕಿಸಬಹುದು.

Share This
300x250 AD
300x250 AD
300x250 AD
Back to top