ಹೊನ್ನಾವರ: ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವದಲ್ಲಿ ತಾಲೂಕಿನ ಕರ್ಕಿಯ ಶ್ರೀಮತಿ ಶ್ರುತಿ ಭಟ್ ಇವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಪಿ.ಎಚ್.ಡಿ ಪದವಿ ಪ್ರದಾನ ಮಾಡಿದರು.
ಶ್ರೀಮತಿ ಶ್ರುತಿ ಭಟ್, ಪ್ರಸ್ತುತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಸೂರತ್ ಇದರ ನಿರ್ದೇಶಕರಾದ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊಫೆಸರ್ ಜೆ. ಎಸ್. ಭಟ್ ಮಾರ್ಗದರ್ಶನದಲ್ಲಿ ‘ಸಮ್ ಇಲೆಕ್ಟ್ರಾನಿಕ್ ಆಂಡ್ ಆಪ್ಟಿಕಲ್ ಪ್ರಾಪರ್ಟಿಸ್ ಆಫ್ ಸೆಮಿಕಂಡಕ್ಟಿಂಗ್ ನಾನೋಸ್ಟ್ರಕ್ಚರ್ಸ್’ ಎಂಬ ವಿಷಯದಲ್ಲಿ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದರು. ಪ್ರಸ್ತುತ ಇವರು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಭೌತಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀಮತಿ ಶ್ರುತಿ ಭಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಕಿಯಲ್ಲಿ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ವೆಂಕಟಮೂರ್ತಿ ಎಸ್. ಜಿ. ಇವರ ಪತ್ನಿಯಾಗಿದ್ದು ಕರ್ಕಿಯ ಶೀಕಾರಿನವರು. ಹಿಂದೂಸ್ತಾನಿ ಹಾಗೂ ಸುಗಮ ಸಂಗೀತದ ಕಲಾವಿದೆಯೂ ಆಗಿದ್ದು ಪ್ರತಿಷ್ಠಿತ ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದೆಯಾಗಿದ್ದಾರೆ. ಇವರು ಸಿದ್ದಾಪುರ ತಾಲೂಕಿನ ಸಂಗೀತ ಶಿಕ್ಷಕರಾದ ವಿ. ಸುಬ್ರಾಯ ಭಟ್ಟ, ಕವಲಕಟ್ಟು ಹಾಗೂ ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಮಹಾಲಕ್ಷ್ಮೀ ಭಟ್ಟ ಇವರ ಪುತ್ರಿ.