Slide
Slide
Slide
previous arrow
next arrow

ಉದ್ದ ಜಿಗಿತ, ಓಟದಲ್ಲಿ ಅಂಕೋಲಾದ ಅಸ್ಮೀತಾ ರಾಜ್ಯ ಮಟ್ಟಕ್ಕೆ

300x250 AD

ಅಂಕೋಲಾ: 2023-24ನೇ ಸಾಲಿನ ಇಲಾಖಾ ವತಿಯಿಂದ ನಡೆಸಲಾದ ಜಿಲ್ಲಾ ಮಟ್ಟದ ಕ್ರೀಡಾಕೂಟವು ಮಹಾತ್ಮಾ ಗಾಂಧಿ ಮೈದಾನ ಕುಮಟಾದಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ ಶೆಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿನಿ ಅಸ್ಮೀತಾ ಗುನಗಾ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಹಾಗೂ 200 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಇವಳ ಸಾಧನೆಗೆ ಸಮಿತಿಯ ಅಧ್ಯಕ್ಷ ರಮಾನಂದ ಬಿ.ನಾಯಕ, ಗೌರವಾಧ್ಯಕ್ಷ ಶಾಂತಾರಾಮ ಎನ್.ನಾಯಕ, ಕಾರ್ಯದರ್ಶಿ ಜಯರಾಮ ಆರ್.ನಾಯಕ, ಆಡಳಿತ ಮಂಡಳಿಯ ಸದಸ್ಯರು, ಮುಖ್ಯಾಧ್ಯಾಪಕ ಎನ್.ವಿ.ರಾಠೋಡ ಹಾಗೂ ಸಿಬ್ಬಂದಿ ವರ್ಗದವರು ಅಸ್ಮೀತಾ ಗುನಗಾ ಹಾಗೂ ದೈಹಿಕ ಶಿಕ್ಷಕ ಭಾರ್ಗವ ನಾಯಕ ಇವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top