Slide
Slide
Slide
previous arrow
next arrow

ಸಮಾಜ ಕಲ್ಯಾಣಾಧಿಕಾರಿಗಳ ವಿರುದ್ಧ ಆರೋಪ ಸತ್ಯಕ್ಕೆ ದೂರ: ರಾಘವೇಂದ್ರ ನೀರ್ನಳ್ಳಿ

300x250 AD

ಕುಮಟಾ: ಹಾಲಿ ಜಿಲ್ಲಾಧಿಕಾರಿಗಳ ಅಲೆಮಾರಿ ಅನುಷ್ಠಾನದ ಸಮಿತಿಯ ಸದಸ್ಯ ಮಂಜುನಾಥ ಆಗೇರ ಅವರು ನ.3ರಂದು ಜಿಲ್ಲಾ ಪತ್ರಿಕಾ ಭವನದಲ್ಲಿ ತಾವು ನೀಡಿದ ಮನವಿ ವಿಚಾರವನ್ನು ಪ್ರಸ್ತಾಪಿಸದೇ ಅವರ ವೈಯಕ್ತಿಕ ವಿಚಾರವನ್ನು ಎತ್ತಿಹಿಡಿಯುವ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ನೇರ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಅಲೆಮಾರಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ನೀರ್ನಳ್ಳಿ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಸಂಬ0ಧಿಸಿ ಕಾರವಾರದಲ್ಲಿ ನ.3ರಂದು ಜಿಪಂ ಸಿಇಓ ಈಶ್ವರ ಕಾಂದೂ ಅವರಿಗೆ ನಾವು ಮನವಿ ನೀಡಿದ್ದೆವು. ಜಿಲ್ಲೆಯ ಅಲೆಮಾರಿ ಪರಿಶಿಷ್ಟ ಜಾತಿಯ ಪ್ರಮುಖರು ಸೇರಿ ಈಗಾಗಲೇ ರಾಜ್ಯದಲ್ಲಿ ಪ್ರತಿ ಗ್ರಾಪಂ ಮಟ್ಟದಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಯನ್ನು ಸರ್ಕಾರ ಕರೆಯುವ ಸಂದರ್ಭದಲ್ಲಿ ಜಿಲ್ಲೆಯ ನಮ್ಮ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೂ ಅವಕಾಶ ಕೊಡಬೇಕೆನ್ನುವ ವಿಚಾರವಾಗಿ ಸಮುದಾಯದ ಪರವಾಗಿ ಮನವಿ ನೀಡಿದ್ದೇವೆ. ಆದರೆ ಮಂಜುನಾಥ ಆಗೇರ ಅವರು ನಮ್ಮೆಲ್ಲರನ್ನೊಳಗೊಂಡ0ತಹ ಪತ್ರಿಕಾ ಮಾಧ್ಯಮಗೊಷ್ಠಿಯಲ್ಲಿ ಮನವಿ ಮಾಡಿ ಬಂದಿರುವ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ಮಾಧ್ಯಮ ಮಿತ್ರರಿಗೆ ಮನವರಿಕೆ ಮಾಡದೇ ಅವರ ಅನುಷ್ಠಾನ ಸಮಿತಿಯಲ್ಲಿ ಆಗಿರುವ ವಿಚಾರಗಳನ್ನು ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.

ಈ ಉದ್ದೇಶವು ಅವರ ವೈಯಕ್ತಿಕ ವಿಚಾರವಾಗಿರುತ್ತದೆ. ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಅಜ್ಜಪ್ಪ ಅವರ ಮೇಲೆ ಆರೋಪ ಮಾಡಲಾಗಿದೆ. ಇಲಾಖೆಯ ಅಧಿಕಾರಿ ಅಜ್ಜಪ್ಪ ಅವರು ನಮ್ಮ ಜಿಲ್ಲೆಯ ಅಲೆಮಾರಿ ಸಮುದಾಯಕ್ಕಾಗಲಿ ಅಥವಾ ಮುಕ್ತಿ ಸಮುದಾಯಕ್ಕಾಗಲಿ ಯಾವುದೇ ರೀತಿಯ ವಂಚನೆ ಮಾಡಿಲ್ಲ. ಆಗೇರ ಅವರು ಮಾಡಿರುವ ಆರೋಪವು ನಮ್ಮೆಲ್ಲರ ಗಮನಕ್ಕೆ ಸರಿಯಾದ ರೀತಿಯಲ್ಲಿ ಸ್ಪಷ್ಟಪಡಿಸದೇ ಇರುವುದರಿಂದ ಈ ಆರೋಪವು ಸತ್ಯಕ್ಕೆ ದೂರವಾಗಿದೆ ಎಂದು ನಮ್ಮ ಸಮುದಾಯದ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.

300x250 AD

ಅದರ0ತೆ ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಲ್ಲಿ ಡಾಟಾ ಆಪರೇಟರ್ ಹುದ್ದೆ ಮತ್ತು ಇನ್ನಿತರ ಯಾವುದೇ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವಾಗ ರೋಸ್ಟರ್ ಪದ್ದತಿ ಅನುಸರಿಸಬೇಕು. ಈ ಕ್ರಮವನ್ನು ಪಾಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ನಮ್ಮ ಸುಮುದಾಯಕ್ಕೆ ರಾಜಕೀಯವಾಗಿ ಯಾವುದೇ ಬೆಂಬಲ ಇಲ್ಲ. ಕೇವಲ ಗ್ರಾ.ಪಂ ಮತ್ತು ತಾ.ಪಂ ಗಳಿಗೆ ಮಾತ್ರ ಸೀಮಿತವಾಗಿದ್ದೇವೆ. ಹೀಗಾಗಿ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರದೇ ನೇಮಕಾತಿ, ಕಾಮಗಾರಿ, ಮೂಲಭೂತ ಸೌಕರ್ಯ ಇತ್ಯಾದಿ ಯಾವುದೇ ವಿಚಾರದಲ್ಲಿಯೂ ಕೂಡಾ ಸಮುದಾಯಕ್ಕೆ ಅನ್ಯಾಯವಾಗದೆ ಸಮರ್ಪಕವಾಗಿ ರೋಸ್ಟರ್ ಪದ್ದತಿಯನ್ನು ಪರಿಗಣನೆ ಮಾಡಿ ತಳಮಟ್ಟದ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ರಾಘವೇಂದ್ರ ನೀರ್ನಳ್ಳಿ ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top