Slide
Slide
Slide
previous arrow
next arrow

ಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ಹಾಲಿನ ದರವನ್ನು ಕಡಿತ ಮಾಡಲಾಗುವುದಿಲ್ಲ: ಸುರೇಶ್ಚಂದ್ರ ಕೆಶಿನ್ಮನೆ

300x250 AD


ಶಿರಸಿ: ಈಗಾಗಲೇ ಜಿಲ್ಲೆಯಲ್ಲಿ ಸಕಾಲದಲ್ಲಿ ಅವಶ್ಯಕತೆ ಇರುವದಕ್ಕಿಂತಲೂ ಕಡಿಮೆ ಮಳೆ ಆಗಿರುವ ಕಾರಣ ಬರಗಾಲದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಹಾಲು ಉತ್ಪಾದಕ ರೈತರ ಹಿತದೃಷ್ಠಿಯಿಂದ ಹಾಲು ಉತ್ಪಾದಕ ರೈತರಿಗೆ ನೀಡಲಾಗುವ ದರದಲ್ಲಿ ಕಡಿತ ಮಾಡಬಾರದೆಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಹಾಲು ಒಕ್ಕೂಟಗಳು ನ.1 ನೇ ತಾರೀಖಿನಿಂದ ಹಾಲು ಉತ್ಪಾದಕ ರೈತರಿಗೆ ನೀಡಲಾಗುವ ದರದಲ್ಲಿ ಕಡಿತ ಮಾಡಿದ್ದರೂ ಸಹ ನಮ್ಮ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸುವ ದೃಷ್ಠಿಯಲ್ಲಿ ಹೈನುಗಾರರ ಹಿತಾಸಕ್ತಿ ಕಾಪಾಡುವ ಸಲುವಾಗಿ ಧಾರವಾಡ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ರೈತರಿಗೆ ನೀಡಲಾಗುವ ಹಾಲಿನ ದರದಲ್ಲಿ ಯಾವುದೇ ರೀತಿಯಲ್ಲಿ ಕಡಿತ ಮಾಡದಿರಲು ಇತ್ತೀಚಿಗೆ ನಡೆದ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಘನ ಅಧ್ಯಕ್ಷರಾದ ಶಂಕರ ವೀರಪ್ಪ ಮುಗದ್‌ ಅವರ ನೇತೃತ್ವದ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು. ನಮ್ಮ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹಾಲನ್ನು ಪೂರೈಸಲು ಇನ್ನೂ ಹೆಚ್ಚಿನ ಹಾಲಿನ ಅವಶ್ಯಕತೆಯಿದ್ದು, ಜಿಲ್ಲೆಯ ಹಾಲು ಉತ್ಪಾಕದರು ಹೆಚ್ಚಿನ ಹಾಲು ಉತ್ಪಾದನೆ ಮಾಡುವುದರ ಜೊತೆಗೆ ಧಾರವಾಡ ಸಹಕಾರ ಹಾಲು ಒಕ್ಕೂಟ ಹಾಗೂ ಕಲ್ಯಾಣ ಸಂಘದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಜಿಲ್ಲೆಯಲ್ಲಿ ಹಾಲಿನ ಶೇಖರಣೆಯನ್ನು ಹೆಚ್ಚಳವಾಗುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಈ ಮೂಲಕ ಅವರು ಕರೆ ನೀಡಿದರು.

ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ಗುಡ್ನಾಪುರ ಹಾಲು ಉತ್ಪಾದಕರ ಸಹಕಾರ ಸಂಗದ ಸದಸ್ಯರುಗಳಾದ ತಂಪೇಶ ಬಂಗಾರಯ್ಯ ನಾಯ್ಕ, ಮಂಜಪ್ಪ ಭೀಮಪ್ಪ ನಾಯ್ಕ ಹಾಗೂ ಆನಂದ ಹುಲ್ಲೆಪ್ಪ ನಾಯ್ಕ ಅವರುಗಳಿಗೆ ತಲಾ ರೂ.33,000/-, ರೂ.43,000/-, ಹಾಗೂ ರೂ.36,000/-,ಜಡ್ಡಿಗದ್ದೆ ಹಾಲು ಸಂಘದ ಸದಸ್ಯರಾದ ಅನಂತ ರಾಮಚಂದ್ರ ಹೆಗಡೆ ಇವರಿಗೆ ರೂ.55,000/- ಮೊತ್ತದ ಚೆಕ್‌ಗಳನ್ನು ಜಾನುವಾರು ವಿಮಾ ಯೋಜನೆಯ ಅಡಿಯಲ್ಲಿ ಮತ್ತು ಚಿಕ್ಕಬೆಂಗಳೆ ಹಾಲು ಉತ್ಪಾದಕರ ಸಹಕಾರ ಸಂಘದ ಸ್ವಂತ ಕಟ್ಟಡ ಹೊಂದಲು ಎರಡನೇ ಹಂತದ ಅನುದಾನದ ಮೊತ್ತ ರೂ.2.5 ಲಕ್ಷದ ಚೆಕ್‌ನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ವಿತರಿಸಿದರು.

300x250 AD

ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಎಸ್. ಎಸ್. ಬಿಜೂರ್‌, ವಿಸ್ತರಣಾ ಸಮಾಲೋಚಕ ಅಭಿಷೇಕ ನಾಯ್ಕ, ಗುಡ್ನಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಮೋಹನ ಕನ್ನಪ್ಪ ನಾಯ್ಕ, ಮುಖ್ಯ ಕಾರ್ಯನಿರ್ವಹಾಕ ಯೋಗೇಂದ್ರ ನಾಯ್ಕ, ಸಂಘದ ಸಹಾಯಕ ಅಕ್ಷಯ ನಾಯ್ಕ, ಗುಡ್ನಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಕೆರೆಸ್ವಾಮಿ ಕಟ್ಯಪ್ಪ ನಾಯ್ಕ, ಮುಖ್ಯ ಕಾರ್ಯನಿರ್ವಹಾಕ ರಾಘವೇಂದ್ರ ನಾಯ್ಕ, ಗುಡ್ನಾಪುರ ಹಾಗೂ ಚಿಕ್ಕಬೆಂಗಳೆ ಹಾಲು ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಜಾನುವಾರು ವಿಮಾ ಯೋಜನೆ ಮತ್ತು ಕಲ್ಯಾಣ ಸಂಘದ ಫಲಾನುಭವಿಗಳು ಹಾಗೂ ಹಾಲು ಉತ್ಪಾದಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top