Slide
Slide
Slide
previous arrow
next arrow

ಅಂಚೆ ಇಲಾಖೆಯಲ್ಲಿ 1899 ಹುದ್ದೆಗಳ ನೇಮಕ: ಇಲ್ಲಿದೆ ಮಾಹಿತಿ

300x250 AD

ಭಾರತೀಯ ಅಂಚೆ ಇಲಾಖೆಯು 2023ನೇ ಸಾಲಿನ ಕ್ರೀಡಾ ಕೋಟಾದ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್‌, ಎಂಟಿಎಸ್‌ ಸೇರಿದಂತೆ ಒಟ್ಟು 1899 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ನವೆಂಬರ್ 10 ರಿಂದ ಡಿಸೆಂಬರ್ 09 ರವರೆಗೆ ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಪೋಸ್ಟಲ್ ಅಸಿಸ್ಟಂಟ್ : 598
ಸಾರ್ಟಿಂಗ್ ಅಸಿಸ್ಟಂಟ್: 143
ಪೋಸ್ಟ್‌ಮ್ಯಾನ್ : 585
ಮೇಲ್ ಗಾರ್ಡ್‌: 03
ಎಂಟಿಎಸ್‌ : 570
ವಿದ್ಯಾರ್ಹತೆ
ಪೋಸ್ಟಲ್ ಅಸಿಸ್ಟಂಟ್ : ಯಾವುದೇ ಪದವಿ ಉತ್ತೀರ್ಣ
ಸಾರ್ಟಿಂಗ್ ಅಸಿಸ್ಟಂಟ್: ಯಾವುದೇ ಪದವಿ ಉತ್ತೀರ್ಣ
ಪೋಸ್ಟ್‌ಮ್ಯಾನ್ : ದ್ವಿತೀಯ ಪಿಯುಸಿ ಉತ್ತೀರ್ಣ
ಮೇಲ್ ಗಾರ್ಡ್‌: ದ್ವಿತೀಯ ಪಿಯುಸಿ ಉತ್ತೀರ್ಣ
ಎಂಟಿಎಸ್‌ : 10ನೇ ತರಗತಿ ಉತ್ತೀರ್ಣ
ಇತರೆ ಅರ್ಹತೆಗಳು: ಮೇಲಿನ ಅರ್ಹತೆಗಳ ಜತೆಗೆ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿದ ರಾಜ್ಯ / ರಾಷ್ಟ್ರೀಯ / ಅಂತಾರಾಷ್ಟ್ರೀಯ / ಅಂತರ ವಿವಿಗಳ ಮಟ್ಟದಲ್ಲಿ ಕ್ರೀಡಾ ಸಾಧನೆಯನ್ನು ಮಾಡಿರಬೇಕು.
ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಎಂಟಿಎಸ್‌ ಹುದ್ದೆಗಳಿಗೆ ಗರಿಷ್ಠ 27 ವರ್ಷದವರೆಗೆ, ಇತರೆ ಹುದ್ದೆಗಳಿಗೆ ಗರಿಷ್ಠ 25 ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ : 10-11-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 09-12-2023
ಅಪ್ಲಿಕೇಶನ್ ತಿದ್ದುಪಡಿಗೆ ಕೊನೆ ದಿನಾಂಕ: ಡಿಸೆಂಬರ್ 10-14 ರವರೆಗೆ.
ಶುಲ್ಕ ಮಾಹಿತಿ : ಸಾಮಾನ್ಯ ವರ್ಗಕ್ಕೆ ಅಭ್ಯರ್ಥಿಗಳಿಗೆ Rs.100, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ Rs.100 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಂಚೆ ಇಲಾಖೆ ಆಯ್ಕೆ ವಿಧಾನ : ವಿದ್ಯಾರ್ಹತೆ ಅಂಕಗಳು ಹಾಗೂ ಕ್ರೀಡಾಸಾಧನೆಯ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ.
ಅಧಿಸೂಚನೆ ಹಾಗೂ ಇತರ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಬಹುದು https://dopsportsrecruitment.cept.gov.in/Notifications/English.pdf
ವೆಬ್‌ಸೈಟ್‌ ವಿಳಾಸ http://appost.in/gdsonline/

300x250 AD
Share This
300x250 AD
300x250 AD
300x250 AD
Back to top