ಕಾರವಾರ: ತಾಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದ ಕನ್ನಡ ಶಿಕ್ಷಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಗಣೇಶ ಎನ್.ಬಿಷ್ಟಣ್ಣನವರ ಅವರಿಗೆ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ರಾಜ್ಯ ಘಟಕ, ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕ ಇವರ ವತಿಯಿಂದ ದಾವಣಗೆರೆಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ 50ನೇ ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನಿಸಲಾಗಿದೆ.
ಕಾರ್ಯಕ್ರಮದಲ್ಲಿ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಫೆಡರೇಶನ್ ರಾಷ್ಟ್ರೀಯ ಉಪಾಧ್ಯಕ್ಷ ಎನ್.ಇ.ನಟರಾಜ, ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಬಿ.ಶಿವಕುಮಾರ, ಸಿದ್ದಪ್ಪ ಸಂಗಣ್ಣನವರ, ಡಾ.ರೇವಣ್ಣ ಬಳ್ಳಾರಿ, ಶಿವಕುಮಾರ ಜಿ.ಬಿ., ಡಾ.ಆರ್.ನಾರಾಯಣಸ್ವಾಮಿ, ಎಸ್.ಡಿ.ಮೂಡಣ್ಣವರ, ಯಲ್ಲಪ್ಪ ಕರಿಯಣ್ಣವರ, ಡಿ.ಕೆ.ಬಳಗಾನೂರ ಮುಂತಾದವರು ಉಪಸ್ಥಿತರಿದ್ದು ಶುಭಕೋರಿದರು.