ನವದೆಹಲಿ: ದೀಪಾವಳಿ ಹಬ್ಬ ಪ್ರಾರಂಭವಾಗುತ್ತಿದ್ದಂತೆ, ರಾಷ್ಟ್ರವ್ಯಾಪಿ ವ್ಯಾಪಾರಿಗಳಲ್ಲಿ ಹೊಸ ಹುಮ್ಮಸ್ಸು ಕಾಣಿಸಿಕೊಂಡಿದೆ. ಅಂದಾಜು 50 ಸಾವಿರ ಕೋಟಿ ರೂಪಾಯಿ ವ್ಯಾಪಾರ ಈ ಬಾರಿ ನಡೆಯಬಹುದು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು ಭವಿಷ್ಯ ನುಡಿದಿದ್ದಾರೆ.
ಎಕ್ಸ್ ಪೋಸ್ಟ್ ಮಾಡಿರುವ ಖಂಡೇಲ್ವಾಲ್ ಅವರು, “ಪ್ರಧಾನಿ ನರೇಂದ್ರ ಮೋದಿಯವರ ಈ ದೀಪಾವಳಿಗೆ ನೀಡಿರುವ ವೋಕಲ್ ಫಾರ್ ಲೋಕಲ್ ಕರೆಗೆ ದೇಶದ 9 ಕೋಟಿ ಉದ್ಯಮಿಗಳು ಸಂಪೂರ್ಣ ಬೆಂಬಲವಿದೆ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮನವಿಯಂತೆ ನಾವು ಎಲ್ಲಾ ಮಹಿಳೆಯರಿಗೆ ದೇಶದ ಮಾರುಕಟ್ಟೆಯನ್ನು ಒದಗಿಸುತ್ತಿದ್ದೇವೆ. ವಾಣಿಜ್ಯೋದ್ಯಮಿಗಳು, ಸಣ್ಣ ಗೂಡಂಗಡಿಯಿಂದ ಹಿಡಿದು ಅಂಗಡಿಗಳನ್ನು ನಡೆಸುತ್ತಿರುವವರವರೆಗೆ ಬೆಂಬಲ ನೀಡುತ್ತೇವೆ. ನೀವು ಸಹ ಮಹಿಳೆಯರಿಂದ ಶಾಪಿಂಗ್ ಮಾಡಿ ಮತ್ತು ಅವರ ಮನೆಗಳಿಗೂ ಭೇಟಿ ನೀಡಿ” ಎಂದು ಖಂಡೇಲ್ವಾಲ್ ಹೇಳಿದ್ದಾರೆ.
‘ವೋಕಲ್ ಫಾರ್ ಲೋಕಲ್’ ಕರೆ ಪ್ರತಿಧ್ವನಿಸುತ್ತದೆ, ಗ್ರಾಹಕರು ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಬಲವಾದ ಆದ್ಯತೆಯನ್ನು ಪ್ರದರ್ಶಿಸುತ್ತಾರೆ. ದೀಪಾವಳಿ ಹಬ್ಬದ ವಸ್ತುಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಚೀನಾ ಸುಮಾರು 1 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.