ಕುಮಟಾ: ರಾಷ್ಟ್ರೀಯ ಮಟ್ಟದ ನೀಟ್, ಜೆಇಇ. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಮತ್ತು ಬೈಜೂಸ್ ಸಂಸ್ಥೆಯು ಜಂಟಿಯಾಗಿ ನಡೆಸಿದ ANTHE-2023 ಪರೀಕ್ಷೆಯಲ್ಲಿ ಕುಮಟಾದ ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್ ಕಾಲೇಜಿನ 13 ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಗೈದಿದ್ದಾರೆ.
ಪಿಸಿಎಮ್ ಸಂಯೋಜನೆಯಲ್ಲಿ ಪರೀಕ್ಷೆ ಬರೆದ 9 ವಿದ್ಯಾರ್ಥಿಗಳಲ್ಲಿ ಕುಮಾರ ಸತ್ಯನಾರಾಯಣ ಭಟ್ಟ ರಾಜ್ಯ ಮಟ್ಟದಲ್ಲಿ 32 ನೇ ರ‍್ಯಾಂಕ್ ಮತ್ತು ರಾಷ್ಟ್ರಮಟ್ಟದಲ್ಲಿ 701 ನೇ ರ‍್ಯಾಂಕ್‌ಗಳಿಸಿ ಆಕಾಶ್ ಮತ್ತು ಬೈಜೂಸ್ ಸಂಸ್ಥೆಯು ಕೊಡುವ ತರಬೇತಿಯ ಪ್ರತಿಶತ 100% ರಷ್ಟು ವಿದ್ಯಾರ್ಥಿ ವೇತನವನ್ನು ಪಡೆಯುವ ಅರ್ಹತೆ ಗಳಿಸಿರುತ್ತಾನೆ. ಅದೇ ರೀತಿ ಎನ್. ಆರ್. ಶ್ರೀಕಾಂತ ರಾಜ್ಯ ಮಟ್ಟದಲ್ಲಿ 60, ರಾಷ್ಟ್ರಮಟ್ಟದಲ್ಲಿ 1180, ವಿವೇಕ ವಿ. ಭಟ್ಟ ರಾಜ್ಯ ಮಟ್ಟದಲ್ಲಿ 90, ರಾಷ್ಟ್ರಮಟ್ಟದಲ್ಲಿ 1642, ನಂದನ ಹಗಡೆ ರಾಜ್ಯ ಮಟ್ಟದಲ್ಲಿ 168, ರಾಷ್ಟ್ರಮಟ್ಟದಲ್ಲಿ 2614, ರೋಹನ್ ಗುನಗಾ ರಾಜ್ಯ ಮಟ್ಟದಲ್ಲಿ 299, ರಾಷ್ಟ್ರಮಟ್ಟದಲ್ಲಿ 5084, ಶ್ರೀಕೃಷ್ಣ ಹೆಗಡೆ ರಾಜ್ಯ ಮಟ್ಟದಲ್ಲಿ 329, ರಾಷ್ಟ್ರಮಟ್ಟದಲ್ಲಿ 5778, ಸಮೀಕ್ಷಾ ಎಸ್ ಭಟ್ಟ ರಾಜ್ಯ ಮಟ್ಟದಲ್ಲಿ 524, ರಾಷ್ಟ್ರಮಟ್ಟದಲ್ಲಿ 9848, ಕಾರ್ತಿಕ ಹೆಗಡೆ ರಾಜ್ಯ ಮಟ್ಟದಲ್ಲಿ 572, ರಾಷ್ಟ್ರಮಟ್ಟದಲ್ಲಿ 10554, ಕಿಶನ್ ಹಗಡೆ ರಾಜ್ಯ ಮಟ್ಟದಲ್ಲಿ 1495, ರಾಷ್ಟ್ರಮಟ್ಟದಲ್ಲಿ 30712ನೇ ರ‍್ಯಾಂಕ್‌ಗಳನ್ನು ಗಳಿಸಿ ಜೆ.ಇ.ಇ ತರಬೇತಿಯ ಪ್ರತಿಶತ 90%, 60%, 50% ಮತ್ತು 45% ರಷ್ಟು ವಿದ್ಯಾರ್ಥಿ ವೇತನವನ್ನು ಪಡೆಯುವ ಅರ್ಹತೆಯನ್ನು ಅನುಕ್ರಮವಾಗಿ ಗಳಿಸಿರುತ್ತಾರೆ. ಅಂತೆಯೇ ಮೊದಲ ಐವರು ವಿದ್ಯಾರ್ಥಿಗಳು ಅತ್ಯುನ್ನತ ಏ1 ಶ್ರೇಣಿ ಪಡೆದು ಸಾಧನೆ ಗೈದಿರುತ್ತಾರೆ.
ಪಿಸಿಬಿ ಸಂಯೋಜನೆಯಲ್ಲಿ ಪರೀಕ್ಷೆ ಬರೆದ 5 ವಿದ್ಯಾರ್ಥಿಗಳಲ್ಲಿ ಅರವಿಂದ ಕವಡಿಕೇರಿ ರಾಜ್ಯ ಮಟ್ಟದಲ್ಲಿ 459, ರಾಷ್ಟ್ರಮಟ್ಟದಲ್ಲಿ 6469, ಸಂಜೀತ ಹೆಗಡೆ ರಾಜ್ಯ ಮಟ್ಟದಲ್ಲಿ 506, ರಾಷ್ಟ್ರಮಟ್ಟದಲ್ಲಿ 7263 ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಚಂದ್ರಿಕಾ ನಾಯಕ ರಾಜ್ಯ ಮಟ್ಟದಲ್ಲಿ 854, ರಾಷ್ಟ್ರಮಟ್ಟದಲ್ಲಿ 17804ನೇ ರ‍್ಯಾಂಕ್ ಗಳೊಂದಿಗೆ ಆಕಾಶ್ ಮತ್ತು ಬೈಜೂಸ್ ಸಂಸ್ಥೆಯು ಕೊಡಮಾಡುವ ಪ್ರತಿಶತ 70% ರಷ್ಟು ವಿದ್ಯಾರ್ಥಿ ವೇತನವನ್ನು ಪಡೆಯುವ ಅರ್ಹತೆ ಗಳಿಸಿದ್ದಾರೆ. ನಿರಂಜನ್ ಹೆಗಡೆ ರಾಜ್ಯ ಮಟ್ಟದಲ್ಲಿ 649, ರಾಷ್ಟ್ರಮಟ್ಟದಲ್ಲಿ 9295, ಅಚ್ಯುತ ಹೆಗಡೆ ರಾಜ್ಯ ಮಟ್ಟದಲ್ಲಿ 1201, ರಾಷ್ಟ್ರಮಟ್ಟದಲ್ಲಿ 19490 ರ‍್ಯಾಂಕ್ ಗಳನ್ನು ಗಳಿಸಿ ಆಕಾಶ್ ಮತ್ತು ಬೈಜೂಸ್ ಸಂಸ್ಥೆಯು ಕೊಡುವ ನೀಟ್ ತರಬೇತಿಯ ಪ್ರತಿಶತ 60% ಮತ್ತು 50% ರಷ್ಟು ವಿದ್ಯಾರ್ಥಿವೇತನ ವನ್ನು ಪಡೆಯುವ ಅರ್ಹತೆಯನ್ನು ಅನುಕ್ರಮವಾಗಿ ಗಳಿಸಿರುತ್ತಾರೆ.
ಅಂತೆಯೇ ಅರವಿಂದ ಮತ್ತು ಸಂಜೀತ ಈ ಇಬ್ಬರು ವಿದ್ಯಾರ್ಥಿಗಳು ಏ1 ಅತ್ಯುನ್ನತ ಶ್ರೇಣಿಯೊಂದಿಗೆ ಅಭೂತಪೂರ್ವ ಸಾಧನೆ ಗೈದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಕೆನರಾ ಎಕ್ಸಲೆನ್ಸ್ ಕಾಲೇಜಿನ ಅಧ್ಯಕ್ಷರಾದ ಡಾ. ಜಿ. ಜಿ ಹೆಗಡೆ, ಪ್ರಾಚಾರ್ಯರಾದ ಡಿ. ಎನ್. ಭಟ್ಟ, ಎಲ್ಲಾ ಉಪನ್ಯಾಸಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿ ಮುಂದಿನ ಸಾಧನೆಗೆ ಶುಭ ಹಾರೈಸಿರುತ್ತಾರೆ.