ಹೊನ್ನಾವರ: ಒಕ್ಕಲಿಗರ ಯಕ್ಷಗಾನ ಬಳಗ ಹೊನ್ನಾವರ ವತಿಯಿಂದ 5ನೇ ವರ್ಷದ ಯಕ್ಷೋತ್ಸವಕಾರ್ಯಕ್ರಮವು ತಾಲೂಕಿನ ಗುಣವಂತೆಯ ಶ್ರೀಮಯಾ ಕಲಾಕೇಂದ್ರದಲ್ಲಿ ನಡೆಯಿತು.
ದಿವಂಗತ ಕೃಷ್ಣ ಭಂಡಾರಿ ಗುಣವಂತೆಯವರ ಗೌರವಾರ್ಥ, ದಿವಂಗತ ಕಮಲಾ ನಾರಾಯಣ ಭಟ್ಟ ಶಿರಾಣಿಯವರ ನೆನಪಿನಲ್ಲಿ ನೀಡುವ ಪ್ರಸ್ತುತ ಸಾಲಿನ ಒಕ್ಕಲಿಗ ಕಲಾಶ್ರೀ ಪ್ರಶಸ್ತಿಯನ್ನು ಖ್ಯಾತ ಮದ್ದಲೆ ವಾದಕ ಮಂಜುನಾಥ ಭಂಡಾರಿ ಕರ್ಕಿ ಇವರಿಗೆ ಪ್ರಧಾನ ಮಾಡಲಾಯಿತು.
ಸಭಾ ಕಾರ್ಯಕ್ರಮ ಉದ್ಘಾಟನೆಯನ್ನು ಯಕ್ಷಗಾನದ ಹಿರಿಯ ಕಲಾವಿದರಾದ ಕೆರಮನೆ ಶಿವಾನಂದ ಹೆಗಡೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿ, ಕಲಾವಿದರಿಗೆ ಯಾವುದೆ ಜಾತಿ ಬೇಧವಿಲ್ಲ. ಕಲೆ ಎಲ್ಲರನ್ನು ಒಂದುಗೂಡಿಸಲಿದೆ. ಕಲೆ ಹಾಗೂ ಕಲಾವಿದರನ್ನು ಪೊತ್ಸಾಹಿಸುವ ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಸಾಲಿನ ಒಕ್ಕಲಿಗ ಕಲಾಶ್ರೀ ಪ್ರಶಸ್ತಿಯನ್ನು ಖ್ಯಾತ ಮದ್ದಲೆ ವಾದಕ ಮಂಜುನಾಥ ಭಂಡಾರಿ ಕರ್ಕಿ ದಂಪತಿಗಳಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಸಾಧಕರಿಗೆ ಅಭಿನಂದನೆ, ಹಿರಿಯ ಕಲಾವಿದರಿಗೆ ಗೌರವ ಸಮರ್ಪಣೆ, ಕಲಾ ಪೋಷಕರಿಗೆ, ಬಾಲ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಒಕ್ಕಲಿಗ ಯಕ್ಷಗಾನ ಬಳಗದ ತಾಲೂಕಾ ಅಧ್ಯಕ್ಷ ರಾಮ ಗೌಡ ಮಾತನಾಡಿ ತಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ಒಕ್ಕಲಿಗರನ್ನು ಹುರಿದುಂಬಿಸುವ ಸಲುವಾಗಿ ವೇದಿಕೆಯನ್ನು ಪ್ರಾರಂಭಿಸಿ ಉಳಿದವರು ನಮ್ಮನ್ನು ಪ್ರೋತ್ಸಾಹಿಸಲಿ ಎನ್ನುವ ದೃಷ್ಠಿಯಿಂದ ನಮ್ಮ ಬಳಗದ ಸದಸ್ಯರು ಸೇರಿ ಇಂದು ಈ ಪ್ರಶಸ್ತಿಯನ್ನು ಮಂಜುನಾಥ ಭಂಡಾರಿ ಕರ್ಕಿ ಅವರಿಗೆ ನೀಡಿ ಗೌರವಿಸಲಾಗಿದೆ. ಕಲೆಯನ್ನು ಉಳಿಸಲು ಕಾರಣಿಕರ್ತರಾದ ಹಿರಿಯ ಕಲಾವಿದರನ್ನು, ಮತ್ತು ಕಲೆಯನ್ನು ಮುಂದೆ ಬೆಳಸುತ್ತಾರೆ ಎನ್ನುವ ದೃಷ್ಠಿಯಿಂದ ಬಾಲ ಕಲಾವಿದರನ್ನು ಗೌರವಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಶ್ರೀಪಾದ ಶೆಟ್ಟಿ, ಡಾ. ಎಸ್ ಡಿ ಹೆಗಡೆ, ಮುಖಂಡರಾದ ಎಮ್.ಕೆ. ಗೌಡ, ಕರವೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷ ವಾಸು ಗೌಡ, ಯಕ್ಷಗಾನ ಬಳಗದ ಕಾರ್ಯದರ್ಶಿ ಎಸ್.ಎಚ್.ಗೌಡ ಮತ್ತಿತರರು ಇದ್ದರು. ಕಾರ್ಯಕ್ರಮದ ನಂತರ ಒಕ್ಕಲಿಗ ಸಂಘದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.