Slide
Slide
Slide
previous arrow
next arrow

ನ.8ಕ್ಕೆ ಹೊಸಗೋಡಗೆ ಹೋರಾಟಗಾರರ ನಿಯೋಗ ಭೇಟಿ

300x250 AD

ಹೊನ್ನಾವರ: ತಾಲೂಕಿನ ಚಿಕ್ಕನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಸಗೋಡದಲ್ಲಿ ಅರಣ್ಯ ಸಿಬ್ಬಂದಿಗಳು, ದೌರ್ಜನ್ಯ ಜರುಗಿಸಿದ ಸ್ಥಳಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿಯೋಗವು ನವೆಂಬರ್ 8, ರಂದು ಮಧ್ಯಾಹ್ನ 2:30 ಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಸಂಚಾಲಕ ರಾಮ ಮರಾಠಿ ಯಲಕೊಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 20, 2023 ರಂದು ತಾಲೂಕಿನ, ಚಿಕ್ಕನಗೋಡ ಗ್ರಾಮ ಪಂಚಾಯಿತಿಯ, ಹೊಸಗೋಡ ಗ್ರಾಮದ ಈಶ್ವರ ಗೌಡ ಅವರ ಅತಿಕ್ರಮಣ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿಗಳು ದೌರ್ಜನ್ಯ ಜರುಗಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ಹಾಗೂ ತಾಲೂಕ ಅಧ್ಯಕ್ಷ ಚಂದ್ರಕಾಂತ ಕೋಚರೆಕ‌ ಅವರ ನೇತ್ರತ್ವದಲ್ಲಿ ನಿಯೋಗವು ಸ್ಥಳಕ್ಕೆ ಭೇಟಿ ನೀಡಲಿದ್ದು, ಆಸಕ್ತರು ಪಾಲ್ಗೊಳ್ಳಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top