ಯಲ್ಲಾಪುರ: ಗ್ರಾ.ಪಂ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಹಳ್ಳಿಗಳನ್ನು ಸೇರಿಸಲು ವಿರೋಧಿಸಿ, ಆಕ್ಷೇಪಣೆಯ ನಿರ್ಣಯವನ್ನು ಗ್ರಾಮ ಸಭೆಯಲ್ಲಿ ನಿರ್ಣಯಿಸಲು ಆಗ್ರಹಿಸಿ ತಾಲೂಕಿನ ಕುಂದರಗಿ ಗ್ರಾಮ ಪಂಚಾಯಿತಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಮಂಗಳವಾರ ಹೋರಾಟಗಾರರ ವೇದಿಕೆ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ತಾಲೂಕಿನ, 15 ಗ್ರಾ.ಪಂ ವ್ಯಾಪ್ತಿಯಲ್ಲಿ, 87 ಹಳ್ಳಿಗಳನ್ನ ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದ್ದು, ಇವುಗಳನ್ನು ಮುಕ್ತಗೊಳಿಸಿ ನಿರ್ಣಯಿಸಲು ನಿಯೋಗವು ಆಗ್ರಹಿಸಿತು. ಪಿಡಿಒ ರವಿ ಪಟಗಾರ ಮನವಿ ಸ್ವೀಕರಿಸಿದರು.
ನಿಯೋಗದಲ್ಲಿ ಜಿಲ್ಲಾ ಸಂಚಾಲಕರಾದ ಸೀತಾರಾಮ ಈಶ್ವರ ನಾಯ್ಕ, ವಾಸುದೇವ ಶ್ರೀನಿವಾಸ ಶೆಟ್ಟಿ, ಪ್ರಭಾಕರ ನಾರಾಯಣ ನಾಯ್ಕ, ಶ್ರೀರಾಮ ಭಟ್ಟ, ದತ್ತು ದೇವಪ್ಪ ನಾಯ್ಕ, ಶ್ರೀಧರ ಶೇರುಗಾರ್, ನಾರಾಯಣ ಗೋವಿಂದ ನಾಯ್ಕ, ದಾಮೋದರ ಪಟಗಾರ, ಸಂದೀಪ ನಾಗಪ್ಪ ನಾಯ್ಕ, ಲಕ್ಷ್ಮಣ ಮರಾಠಿ, ಜಟ್ಟಿ ಮಾರು ಪಟಗಾರ, ಸಿದ್ದಯ್ಯ ಮೂಡಿ, ರಾಮ ಶೇಷು ಪೂಜಾರಿ, ರಮೇಶ ಸಿದ್ದಿ, ಪ್ರಭಾಕರ ನಾಗಪ್ಪ ಭಂಡಾರಿ, ರಾಘವೇಂದ್ರ ಭಟ್ಟ, ರಾಮಕೃಷ್ಣ ಲಕ್ಷ್ಮಣ ದೇಶಭಂಡಾರಿ, ಉಮೇಶ ರಾಮ ಮರಾಠಿ, ವಿಶ್ವಾಸ ವಾಮನ ನಾಯ್ಕ, ನಾಗರಾಜ ನಾಯ್ಕ ಉಪಸ್ಥಿತರಿದ್ದರು.